ಧಾರವಾಡ : ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ತಾಲ್ಲೂಕಿನ ನಿಗದಿ ಗ್ರಾಮದಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.
75ನೇ ಸ್ವಾತಂತ್ರ್ಯೋತ್ವದ ದಿನವಾದ ಇಂದು ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಗ್ರಾಮದ ಹಿರಿಯರು ಹಾಗೂ ಯುವಕರು ಪುಷ್ಪವನ್ನು ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿ,ಡೊಳ್ಳು ಕುಣಿತದ ಮೂಲಕ ಗ್ರಾಮದಲ್ಲಿ ರಾಯಣ್ಣನ ಭಾವಚಿತ್ರ ಮೆರವಣೆಗೆ ನಡೆಸಿದರು
ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ನಿದ್ದೆಗೆಡಿಸಿ ಅವರ ವಿರುದ್ಧ ಹೋರಾಡಿದ ವೀರ ಸೇನಾನಿ. ಸ್ವಾತಂತ್ರ್ಯದ ಸಲುವಾಗಿ ಹೋರಾಡಿ ಮಡಿದ ಕ್ರಾಂತಿವೀರರಾದ ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕೆಂದು ಯುವಕರಿಗೆ ಹಿರಿಯರು ತಿಳಿಸಿದರು.
Kshetra Samachara
15/08/2021 02:23 pm