ಕಲಘಟಗಿ:ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಪ್ರದರ್ಶನದಲ್ಲಿ ಕರುಗಳಿಗೆ ಇಲಾಖೆಯಿಂದ ಜಂತು ನಿವಾರಕ ಔಷಧಿ ನೀಡಿ ಕರುಗಳ ಪಾಲನೆಯ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು.
ತಾಲೂಕಿನ ವಿವಿಧ ಗ್ರಾಮಗಳ ರೈತರು ತಾವು ಪಾಲನೆಮಾಡಿರುವ ಕರುಗಳನ್ನು ಪ್ರದರ್ಶನಕ್ಕೆ ತಂದಿದ್ದರು.ಆರೋಗ್ಯವಂತ ಕರುಗಳಿಗೆ ಬಹುಮಾನವನ್ನು ಕೂಡಾ ವಿತರಿಸಲಾಯಿತು.
ಈ ವೇಳೆ ಡಾ ಎಸ್ ವಿ ಸಂತಿ,ನಿರ್ಣಾಯಕ ಸಂತೋಷ ಹಂಜಗಿ,ಡಾ ಸುರೇಶ ಗೊಂಡೆ,ಗಂಟಿ,ಗ್ರಾ ಪಂ ಅಧ್ಯಕ್ಷೆ ಸುಭದ್ರಮ್ಮ ಉಪಸ್ಥಿತರಿದ್ದರು.
Kshetra Samachara
26/02/2021 05:19 pm