ಕಲಘಟಗಿ : ತಾಲೂಕಿನ ಮಿಶ್ರೀಕೋಟಿ ಗ್ರಾಮದಲ್ಲಿ ಪಾಂಡುರಂಗ ದೇವಸ್ದಾನದ 56ನೇ ವರ್ಷದ ದಿಂಡಿ ಉತ್ಸವ ಇಂದು ಆರಂಭವಾಗಿದ್ದು ವಿಠ್ಠಲ ಕರ್ತೃ ಗದ್ದುಗೆಗೆ ಪೂಜಾಭಿಷೇಕ ನೆರವೇರಿಸಲಾಗಿದೆ.
ಈಗಾಗಲೇ ದೇವಸ್ಥಾನದಲ್ಲಿ ಸಾಯಂಕಾಲ ನಾಲ್ಕು ಗಂಟೆಗೆ ಪೋತಿ ಸ್ಥಾಪನೆ ಕಾರ್ಯಕ್ರಮ ಮುಗಿದಿದ್ದು, ಸಂತರಿಂದ ಕೀರ್ತನೆ ಕಾರ್ಯಕ್ರಮ ನಡೆದಿದೆ.
ಪಾಳೆ ಭಜನೆ ಮತ್ತು ವೀಣಾ ಜಾಗರಣೆ ಕಾರ್ಯಕ್ರಮ ಆರಂಭವಾಗಿದ್ದು ಪರಮಾತ್ಮನ ಶ್ರೀ ಕೃಷ್ಣ ಅವತಾರ ಪಾಂಡುರಂಗ ವಿಠ್ಠಲ್ ಕೀರ್ತನೆ ಹೇಳುವಲ್ಲಿ ಸಂತರು ಕಿರ್ತನೆಕಾರರು ರಾತ್ರಿ ಇಡೀ ಭಜನೆ ಕಾರ್ಯಕ್ರಮಕ್ಕೆ ಅಣಿಯಾಗಿದ್ದಾರೆ.
Kshetra Samachara
25/02/2021 10:48 pm