ಕಲಘಟಗಿ:ತಾಲೂಕಾ ಅರ್ಚಕ ಹಾಗೂ ಪುರೋಹಿತರ ಸಂಘದ ಉದ್ಘಾಟನೆಯನ್ನು ವಿದ್ಯುಕ್ತವಾಗಿ ನೆರವೇರಿಸಲಾಯಿತು.
ಪಟ್ಟಣದ ಹನ್ನೆರಡು ಮಠದಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ, ಶಿರಕೋಳದ ಶ್ರೀಗುರುಶಿದ್ದೇಶ್ವರ ಶಿವಾಚಾರ್ಯ ಹಿರೇಮಠ ಸ್ವಾಮೀಜಿ ದೀಪ ಬೆಳಗಿಸಿ ಸಂಘವನ್ನು ಉದ್ಘಾಟಿಸಿದರು.
ಶ್ರೀ ರೇವಣಸಿದ್ಧ ಶಿವಾಚಾರ್ಯರು ದಿವ್ಯ ಸಾನಿಧ್ಯವಹಿಸಿದ್ದರು.ಮಹೇಶ್ವರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ಬ್ಯಾಹಟ್ಟಿ ಶ್ರೀ ಮರುಳಸಿದ್ಧ ಶಿವಾಚಾರ್ಯರು,ಶ್ರೀ ರೇವಣಶಿದ್ಧೇಶ್ವರ ಸ್ವಾಮೀಜಿ,ಪ್ರಕಾಶ ಬೆಂಡಿಗೇರಿ,ಬಂಗಾರೇಶ ಹಿರೇಮಠ,ಎಸ್ ವಿ ತಡಸಮಠ,ಭಾರತಿ
ಕುಡಚಿಮಠ,ಎಸ್ ಎಸ್ ಪಾಟೀಲ,ಸಿ ಆರ್ ಹಿರೇಮಠ,ಗುರುಪಾದಯ್ಯ ಹಿರೇಮಠ,ಶೇಕಯ್ಯ ಬೆಂಡಿಗೇರಿಮಠ ಉಪಸ್ಥಿತರಿದ್ದರು.
Kshetra Samachara
25/02/2021 02:25 pm