ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕ ಅರ್ಚಕ,ಪುರೋಹಿರ ಸಂಘದ ಉದ್ಘಾಟನೆ ಫೆ 25 ರಂದು

ಕಲಘಟಗಿ:ತಾಲೂಕಾ ಅರ್ಚಕ ಹಾಗೂ ಪುರೋಹಿತರ ಸಂಘದ ಉದ್ಘಾಟನೆ ಪಟ್ಟಣದ ಹನ್ನೆರಡು ಮಠದಲ್ಲಿ ಇದೇ

ಫೆಬ್ರವರಿ 25 ರಂದು ಮುಂಜಾನೆ 11 ಘಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ

ಮಹೇಶ್ವರಯ್ಯ ಹಿರೇಮಠ ತಿಳಿಸಿದರು.

ಅವರು ಪಟ್ಟಣದಲ್ಲಿ ಪತ್ರಿಕಾಗೋಷ್ಠಿ,ಉದ್ದೇಶಿಸಿ ಮಾತನಾಡಿ,ಉದ್ಘಾಟನಾ ಸಮಾರಂಭದಲ್ಲಿ ಬಾಳೆ ಹೋನ್ನೂರಿನ

ಶ್ರೀ ಜಗದ್ಗುರ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯವಹಿಸುವರು.

ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಬಾಳೆಹೂಸೂರು ನೇತೃತ್ವ ವಹಿಸಲಿದ್ದು,ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಜಿ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ಜರುಗಲಿವೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟನೆಯನ್ನು ನೆರವೇರಿಸುವರು,ಶಾಸಕ ಸಿ ಎಂ ನಿಂಬಣ್ಣವರ ಜ್ಯೋತಿ ಬೆಳಗಿಸುವರು,ಮಹೇಶ್ವರಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು,ಅತಿಥಿಗಳಾಗಿ ಮಾಜಿ ಸಚಿವ ಸಂತೋಷ ಲಾಡ್,ನಾಗರಾಜ ಛಬ್ಬಿ,ಮಹೇಶ ಟೆಂಗಿನಕಾಯಿ,ಬಂಗಾರೇಶ ಹಿರೇಮಠ,ವಿದ್ವಾನ ಚಂದ್ರಶೇಖರ ಶಾಸ್ತ್ರಿ,ಶಿವು ಹಿರೇಮಠ,ಬಸವರಾಜ ಕುಂದಗೋಳಮಠ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುವರು.ಕಾರಣ ಅರ್ಚಕರು,ಪುರೋಹಿತರು ಜಂಗಮ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಗಮ ಸಮಾಜದ ಅಧ್ಯಕ್ಷ ಚನ್ನಯ್ಯ ಹಿರೇಮಠ,ಎಸ್ ವ್ಹಿ ತಡಸಮಠ,ಚನ್ನಬಸಯ್ಯ ಚಿಕ್ಕಮಠ,ಗುರುಪಾದಯ್ಯ ಹಿರೇಮಠ,ಶೇಕಯ್ಯ ಬೆಂಡಿಗೇರಿಮಠ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

24/02/2021 10:47 am

Cinque Terre

14.86 K

Cinque Terre

1

ಸಂಬಂಧಿತ ಸುದ್ದಿ