ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 21ಕ್ಕೆ ಎಸ್.ಎಸ್.ಕೆ‌ ಸಮಾಜದಿಂದ ಸತ್ಕಾರ, ಅಭಿನಂದನಾ ಸಮಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ನಾಗೇಶ ಕಲಬುರ್ಗಿಯವರಿಗೆ ಎಸ್.ಎಸ್.ಕೆ.ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ವತಿಯಿಂದ ಸತ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಇದೇ 21ರಂದು ಕೇಶ್ವಾಪೂರದ ಶ್ರೀನಿವಾಸ ಗಾರ್ಡನನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಎಸ್.ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಹೇಳಿದರು.

ನಗರದಲ್ಲಿಂದು ತುಳಜಾಭವಾನಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಎಸ್.ಎಸ್.ಕೆ ಸಮಾಜವು ರಾಜಕೀಯವಾಗಿ,ಸಾಮಾಜಿಕವಾಗಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರತಿಭಾವಂತರಿಗೆ ಪ್ರೋತ್ಸಾಹಿಸಿ ಮತ್ತಷ್ಟು ಬೆಂಬಲ ನೀಡುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು.

ನಾಗೇಶ ಕಲಬುರ್ಗಿಯವರ ನೇಮಕಕ್ಕೆ ಕಾರಣಿಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರಿಗೆ ಅಭಿನಂದನಾಪೂರ್ವಕ ಸತ್ಕಾರ ಮಾಡಲಾಗುತ್ತದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಕಂಠಸಾ ಜಡಿ ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಅಮೃತ ದೇಸಾಯಿ,ಶಂಕರಪಾಟೀಲ ಮುನೇನಕೊಪ್ಪ, ಎಸ್.ವಿ ಸಂಕನೂರ,ಸಿ.ಎಂ.ನಿಂಬಣ್ಣವರ ಆಗಮಿಸಲಿದ್ದಾರೆ. ಇನ್ನೂ ಇದೇ ಸಂದರ್ಭದಲ್ಲಿ ನಿಗಮ ಮಂಡಳಿಗೆ ಆಯ್ಕೆಯಾದ ರಾಜು.ಜರ್ತಾರಘರ, ಸಂಗೀತಾ ಬದ್ದಿ,ರಂಜನಾ ಬಂಕಾಪೂರ ಇವರಿಗೆ ಸತ್ಕರಿಸಲಾಗುತ್ತದೆ ಎಂದು ಅವರು ಹೇಳಿದರು.

Edited By : Manjunath H D
Kshetra Samachara

Kshetra Samachara

19/02/2021 03:34 pm

Cinque Terre

12.75 K

Cinque Terre

0

ಸಂಬಂಧಿತ ಸುದ್ದಿ