ಧಾರವಾಡ : ಮಾಳಮಡ್ಡಿಯ ಉಪಾಧ್ಯೆ ನೃತ್ಯವಿಹಾರ ಆಶ್ರಯದಲ್ಲಿ ಕು. ಶ್ರೇಯಾ ದೇಶಪಾಂಡೆ ಅವರಿಂದ ಗುರುವಂದನಾ ಹಾಗೂ ನೃತ್ಯಾರ್ಪಣಾ ಭರತನಾಟ್ಯ ರಂಗಪ್ರವೇಶ ತಾಲ ಲಯಗಳ ಸಮ್ಮಿಲನದಿಂದ ಯಶ್ಸಸ್ವಿಗೊಂಡಿತು.
ಹಿರಿಯ ನೃತ್ಯ ಕಲಾವಿದೆ ವಿದುಷಿ ಸುಜಾತಾ ರಾಜಗೋಪಾಲ ರಂಗಪ್ರವೇಶ ಉದ್ಘಾಟನೆ ಮಾಡಿ ಭರತನಾಟ್ಯದಲ್ಲಿ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠ ಪ್ರಕಾರವಾಗಿದ್ದು ಇದರಲ್ಲಿ ಮನುಷ್ಯ ಸದೃಢ ಮನಸ್ಸು ಏಕಾಗ್ರತೆ ಹಾಗು ದೈಹಿಕ ಕಸರತ್ತುಗಳನ್ನು ಕಲಿಯುವುದರ ಜೊತೆಗೆ ಎಲ್ಲ ವಿಧಗಳಲ್ಲಿ ಶ್ರೇಯಸ್ಸನ್ನು ಈ ಭರತನಾಟ್ಯ ಕಲಿಯುವುದರ ಮೂಲಕ ಪಡೆಯಬಹುದಾಗಿದೆ ಎಂದರು.
ನಂತರದಲಿ ಕುಮಾರಿ ಶ್ರೇಯಾ ಪುಷ್ಪಾಂಜಲಿ ರಾಗ ಹಂಸಧ್ವನಿ ಆದಿತಾಳದಲ್ಲಿ ಪ್ರದರ್ಶನ ನೀಡಿದರೆ ಅಲರಿಪು ಸಂಕೀರಣಛಾಪು ತಾಳ, ಜತಿಸ್ವರ ನಾಟಕುರಂಜಿ ಖಂಡಛಾಪು ತಾಳ ರಚನೆ ದ್ವಾರಕಿ ಕೃಷ್ಣಸ್ವಾಮಿ ಸಂಪೂರ್ಣ ಜತಿಗಳನ್ನು ಸೂಕ್ಷ್ಮವಾಗಿ ಪ್ರದರ್ಶನ ನೀಡಿದ್ದು ವಿಶೇಷವಾದರೆ, ಕೌತ್ವಂ ವಲಜಿ ರಾಗ ಮಿಶ್ರಛಾಪು ತಾಳ ಹಾಗೂ ಪದವರ್ಣ ರಾಗಮಾಲಿಕೆ ಅದಿತಾಳ ದಂಡಾಯಧಪಾಣಿ ಪಿಳೈ ರಚನೆಯಲ್ಲಿ ಅರ್ಧಘಂಟೆ ಅಧ್ಬುತ ಪ್ರದರ್ಶನ ನೀಡಿ ಜನಮನ ಮೆಚ್ಚುಗೆ ಪಡೆದಳು.
ನಂತರದಲಿ ಪದಂ ತೋಡಿ ರಾಗ ಆದಿ ತಾಳ ಉತ್ತುಕಾಡ ವೆಂಕಟ ಸುಬ್ಬಯ್ಯರ್ ರಚನೆ, ಕೃತಿ ಕಮಲಮನೋಹರಿ ರಾಗ ಆದಿತಾಳ ಮುತ್ತುಸ್ವಾಮಿ ದೀಕ್ಷಿತರ ರಚನೆ ಸುಂದರವಾಗಿ ರಂಮಂಚದಲ್ಲಿ ಮೂಡಿಬಂದಿತು. ಕೊನೆಗೆ ತಿಲ್ಲಾನ ಸಿಂಹೇಂದ್ರ ಮಧ್ಯಮ ಆದಿತಾಳ ಮಧುರೈ ಕೃಷ್ಣನ್ ರಚನೆಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದಳು
Kshetra Samachara
15/02/2021 01:45 pm