ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ; ನೈಋತ್ಯ ರೈಲ್ವೆ ವಲಯದಲ್ಲಿ ಅಂಬೇಡ್ಕರ್ ಪುತ್ಥಳಿ ಲೋಕಾರ್ಪಣೆ

ಹುಬ್ಬಳ್ಳಿ; ಆಲ್ ಇಂಡಿಯಾ ಎಸ್.ಸಿ ಎಸ್.ಟಿ ರೈಲ್ವೆ ಎಂಪ್ಲಾಯಿಸ್ ಅಸೋಸಿಯೇಷನ್ ಹಾಗೂ ಜೋನಲ್ ಎಕ್ಸಿಕ್ಯುಟಿವ್ ಕಮೀಟಿ ಸಹಯೋಗದೊಂದಿಗೆ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ರೈಲು ಸೌಧದಲ್ಲಿ ಸ್ಥಾಪನೆ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಕೆಯನ್ನು ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅಜಯಕುಮಾರ್ ಸಿಂಗ್, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹೋರಾಟದ ಜೊತೆಗೆ ಭಾರತಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಮಹಾನ ಸಾಧಕರಾಗಿದ್ದಾರೆ‌. ಬಹುದಿನಗಳಿಂದ ಇದ್ದ ಕನಸು ಈಗ ನನಸಾಗಿದ್ದು, ಡಾ‌.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿ ಜೀವನ ನಡೆಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಎಸ್.ಧಮ್ಮಣ್ಣವರ,ಎಂ.ಮೋಹನ ಹಾಗೂ ಅಸೊಶಿಯೇಶನ್ ಸೆಕ್ರೆಟರಿ ಸಿ.ಪಾಂಡು ಸೇರಿದಂತೆ ಇತರರು ಇದ್ದರು.

Edited By : Nagaraj Tulugeri
Kshetra Samachara

Kshetra Samachara

26/01/2021 07:34 pm

Cinque Terre

10.27 K

Cinque Terre

1

ಸಂಬಂಧಿತ ಸುದ್ದಿ