ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜ. 26 ಕ್ಕೆ ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನ

ಹುಬ್ಬಳ್ಳಿ : ನೂಪುರ ನೃತ್ಯ ವಿಹಾರದ ಸಂಸ್ಥಾಪಕ ಅಧ್ಯಕ್ಷ ದಿ. ವಿದ್ವಾನ್ ಬಿ. ನಾಗರಾಜ ಅವರ ಹತ್ತನೇ ಪುಣ್ಯಸ್ಮರಣೆ ಅಂಗವಾಗಿ, ಧಾರಾವಾಡ ರಂಗಾಯಣ ಸಹಯೋಗದೊಂದಿಗೆ, ರಂಗಾಯಣದ ರೆಪರ್ಟಿ ಕಲಾವಿದರು ಅಭಿನಯಿಸಿರುವ ಸಾಮ್ರಾಟ್ ಅಶೋಕ ನಾಟಕವನ್ನು ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಜ. 26 ಸಂಜೆ 5:30 ಕ್ಕೆ ಉಚಿತ ಪ್ರದರ್ಶನ ನಡೆಯಲಿದೆ‌ ಎಂದು ನೃತ್ಯ ವಿಹಾರದ ಅಧ್ಯಕ್ಷ ಎಚ್.ಎಸ್. ಕಿರಣ ತಿಳಿಸಿದ್ದಾರೆ.

ಈ ನಾಟಕದ ಚಾಲನೆಯನ್ನು ಸಚಿವರಾದ ಜಗದೀಶ್ ಶೆಟ್ಟರ್ ನೀಡಲಿದ್ದು, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್ , ಲಿಂಗರಾಜ ಪಾಟೀಲ್, ಗೋಪಾಲ್ ಕೃಷ್ಣ, ಬಾಳಣ್ಣ ಶಿಗೀಹಳ್ಳಿ, ಸುಭಾಷ ನರೇಂದ್ರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

25/01/2021 12:59 pm

Cinque Terre

36.8 K

Cinque Terre

0

ಸಂಬಂಧಿತ ಸುದ್ದಿ