ಹುಬ್ಬಳ್ಳಿ : ಗಣರಾಜ್ಯೋತ್ಸವದ ಅಂಗವಾಗಿ ಶ್ರೀ ಸದ್ಗುರು ಚೆಸ್ ಸ್ಮಾರ್ಟ್ಜ್ & ಆರ್ಟ್ ರಿಫ್ಲೆಕ್ಟ್ಸ್ ವತಿಯಿಂದ PublicNext News App ಸಹಯೋಗದಲ್ಲಿ ಮುಕ್ತ ಮೇಗಾ ಪೇಂಟಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧಾಳುಗಳು ತಮಗೆ ಇಷ್ಟವಾದ ಬಣ್ಣ ಉಪಯೋಗಿಸಿ ಗಣರಾಜ್ಯೋತ್ಸವ ಕುರಿತ ಚಿತ್ರ ಬಿಡಿಸುವ ಮೂರು ನಿಮಿಷದ ವಿಡಿಯೊವನ್ನು ವಾಟ್ಸಪ್ ಮೂಲಕ ಕಳಿಸುವುದು. ಪ್ರವೇಶ ಶುಲ್ಕ 120 ರೂ ಹಾಗೂ ವಿಡಿಯೊ ಕಳಸಿವು ಕೊನೆಯ ದಿನ ಜನವರಿ 26, 2021.
ಮೊದಲ ಮೂವರು ವಿಜೇತರಿಗೆ ಅನುಕ್ರಮವಾಗಿ 1000, 500 ಹಾಗೂ 250 ರೂ ನಗದು ಬಹುಮಾನ ನೀಡಲಾಗುವುದು. ನಾಲ್ಕು ಹಾಗೂ ಐದನೆ ಬಹುಮಾನ ಪಡೆದವರಿಗೆ ಆಕರ್ಷಕ ಟ್ರೋಫಿ ಹಾಗೂ ಆರರಿಂದ ಹತ್ತನೇ ಬಹುಮಾನ ಪಡೆದವರಿಗೆ ಪದಕ ನೀಡಲಾಗುವುದು. ಭಾವಹಿಸಿದ ಎಲ್ಲರಿಗೂ ವಾಟ್ಸಪ್ ಮೂಲಕ ಪ್ರಮಾಣ ಪತ್ರ ಕಳುಹಿಸಲಾಗುವುದು.
ಆಸಕ್ತರು ಈ ಮುಂದೆ ಸೂಚಿಸಿದ ನಂಬರ್ ಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದು ಹಾಗೂ ವಿಡಿಯೋ ಕಳಿಸಬಹುದು. 93806-71947
Kshetra Samachara
24/01/2021 07:37 pm