ಕುಂದಗೋಳ : ತಾಲೂಕಿನ ಅಲ್ಲಾಪುರ ಗ್ರಾಮದೇವಿ ದ್ಯಾಮವ್ವನ ಜಾತ್ರಾ ಉತ್ಸವವು ಕೊರೊನಾ ವೈರಸ್ ಕಾರಣದಿಂದ ಅತಿ ಸರಳವಾಗಿ ಅಲ್ಲಾಪುರ ಗ್ರಾಮದಲ್ಲಿ ಇಂದು ನೆರವೇರಿತು.
ಗ್ರಾಮದೇವತೆ ಜಾತ್ರಾ ಉತ್ಸವದ ಅಂಗವಾಗಿ ಬೆಳಿಗ್ಗೆ ದ್ಯಾಮವ್ವ ದೇವಿಗೆ ಪೂಜಾಭಿಷೇಕ ಹಾಗೂ ಹೋಮ ಹವನವನ್ನು ಸಕಲ ಭಕ್ತಾಧಿಗಳಿಗಳ ಸಮ್ಮುಖದಲ್ಲಿ ಅಲ್ಲಾಪುರ ಗ್ರಾಮದ ಚನ್ನಯ್ಯ ಸ್ವಾಮಿಗಳು ಕೈಗೊಂಡು ಮಂತ್ರ ಪಠನೆ ಗೈದರು, ಬಳಿಕ ದೇವಸ್ಥಾನದ ಸುತ್ತ ಪಲ್ಲಕ್ಕಿ ಉತ್ಸವ ನಡೆಯಿತು.
ಜಾತ್ರಾ ಉತ್ಸವಕ್ಕೆ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ ಕಲ್ಯಾಣಪುರ ಬಸವಣ್ಣನವರು, ಶಿವಲಿಂಗೇಶ್ವರ ಮಹಾಸ್ವಾಮಿಗಳು, ಶಿವಯೋಗಿಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತವೃಂದದ ಪಾದ ಪೂಜೆಗೆ ಪಾತ್ರವಾಗಿ ನೆರೆದ ಸಭಿಕರಿಗೆ ಆರ್ಶಿವಚನ ಬೋಧಿಸಿದರು, ಜಾತ್ರೆಯಲ್ಲಿ ಪಾಲ್ಗೊಂಡ ಮಹಿಳೆಯರು, ಮಕ್ಕಳು, ಹಿರಿಯರು, ನಾಗರೀಕರು ಪ್ರಸಾದ ಸವಿದು ಪುನೀತರಾದರು.
Kshetra Samachara
22/01/2021 05:46 pm