ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ :ರಾಷ್ಟ್ರೀಯ ಮತದಾರ ದಿನ : ಪದವಿ ಪೂರ್ವ ಕಾಲೇಜುಗಳಿಂದ ಜನಜಾಗೃತಿ ಜಾಥಾ

ಧಾರವಾಡ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಯುಂಕ್ತವಾಗಿ ಇಂದು ಬೆಳಿಗ್ಗೆ ವಿವಿಧ ಪದವಿ ಪೂರ್ವ ಕಾಲೇಜಗಳ ಮತದಾರ ಸಾಕ್ಷರತಾ ಕ್ಲಬ್ ಗಳ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಬೃಹತ ಜನಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಂಬರ‌ ಅವರು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಜ್ಯಮಟ್ಟದ ತರಬೇತಿದಾರ ಕೆ.ಎಮ್.ಶೇಖ, ಜಿಲ್ಲಾ ಮತದಾರ ಸಾಕ್ಷರತಾ ಸಮಿತಿಗಳ ನೋಡೆಲ್ ಅಧಿಕಾರಿ ರಮೇಶ ಹಡಪದ ಹಾಗೂ

ಶಿಕ್ಷಕ ಎಪ್.ಬಿ.ಕಣವಿ ನೇತೃತ್ವದ ಸ್ನೇಹರಂಗ ಕಲಾತಂಡದ ಸದಸ್ಯರ ಮತದಾರ ಜಾಗೃತಿ ಗೀತೆಗಳೊಂದಿಗೆ ಅರ್.ಎಲ್.ಎಸ್., ಅಂಜುಮಾನ, ಮದಿನಾ ಸೇರಿದಂತೆ ಅನುದಾನಿತ, ಅನುದಾನ ರಹಿತ ಮತ್ತು ವಿವಿಧ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮತದಾರ ಜಾಗೃತಿ ಜಾಥಾ ಕಾರ್ಯಕ್ರಮವು ಆರ್.ಎನ್.ಶೆಟ್ಟಿ ಕ್ರೀಡಾಂಗಣದಿಂದ ಆರಂಭವಾಗಿ ಆಲೂರು ವೆಂಕಟರಾವ್ ವೃತ್ತ, ಹಳೆ ಬಸನಿಲ್ದಾಣ, ವಿವೇಕಾನಂದ ವೃತ್ತದ ಮೂಲಕ ಜಿಲ್ಲಾ ನ್ಯಾಯಾಲಯದ ಮೂಲಕ ಆರ್ ಎನ್.ಶೆಟ್ಟಿ ಕ್ರೀಡಾಂಗಣಕ್ಕೆ ಬಂದು ಮುಕ್ತಾಯವಾಯಿತು.

Edited By : Nagesh Gaonkar
Kshetra Samachara

Kshetra Samachara

22/01/2021 12:23 pm

Cinque Terre

19.56 K

Cinque Terre

0

ಸಂಬಂಧಿತ ಸುದ್ದಿ