ಹುಬ್ಬಳ್ಳಿ: ಕೊರೋನಾ ವೈರಸ್ ಬಂದಿದ್ದೆ ಬಂದಿದ್ದು,ಎಲ್ಲ ಹಬ್ಬ ಹರಿದಿನಗಳಿಗೆ ಕರಿಛಾಯೆ ಬಿದ್ದಿದ್ದಂತೂ ಸತ್ಯ. ಈ ಬಾರಿ ಮಕರ ಸಂಕ್ರಾಂತಿ ಹಬ್ಬಕ್ಕೂ ಕೂಡ ಕರೋನಾ ಕರಿನೆರಳಿನಿಂದ ಹಬ್ಬ ಅಷ್ಟೇನೂ ಹೇಳಿಕೊಳ್ಳುವ ಮಟ್ಟಿಗೆ ಆಗಿಲ್ಲ ಎಂಬುವುದು ಸಾರ್ವಜನಿಕರ ಮಾತು ಆದರೇ ಇಲ್ಲೊಂದು ಕಾಲೇಜಿನ ವಿದ್ಯಾರ್ಥಿಗಳು ಈ ಮಾತನ್ನು ಹುಸಿಯಾಗಿಸಿದ್ದಾರೆ. ಹಾಗಿದ್ದರೇ ಯಾವುದು ಆ ಕಾಲೇಜು ವಿದ್ಯಾರ್ಥಿಗಳು ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.
ಸೀರೆ ತೊಟ್ಟು ಕಂಗೊಳಿಸುತ್ತಿರುವ ವಿದ್ಯಾರ್ಥಿನಿಯರು, ಸಾಂಪ್ರದಾಯಿಕ ವಸ್ತ್ರಗಳನ್ನು ತೊಟ್ಟು ಮಿಂಚುತ್ತಿರುವ ವಿದ್ಯಾರ್ಥಿಗಳು.ಮಕರ ಸಂಕ್ರಾಂತಿ ಹಬ್ಬದ ಸಂಪ್ರದಾಯಿಕ ಆಚರಣೆ. ಇದೆಲ್ಲ ಕಂಡು ಬಂದಿದ್ದು, ಹುಬ್ಬಳ್ಳಿ ವಿದ್ಯಾನಗರದ ಶ್ರೀ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿನಲ್ಲಿ.
ಹೌದು...ಜನವರಿ ತಿಂಗಳಲ್ಲಿ ಬರುವ ಈ ಹಬ್ಬ ವರ್ಷದ ಮೊದಲ ಹಬ್ಬ ಎಂದೇ ಖ್ಯಾತಿ ಪಡೆದ ಸಂಕ್ರಾಂತಿ ಹಬ್ಬವನ್ನು ಕಾಲೇಜಿನ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಇನ್ನೂ ವಿದ್ಯಾರ್ಥಿಗಳು ಭಾರತೀಯ ಸಂಪ್ರದಾಯದಂತೆ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದು, ವಿಶೇಷವಾಗಿತ್ತು.
ವಿದ್ಯಾರ್ಥಿಗಳು ಮಾತ್ರವಲ್ಲದೆ ಉಪನ್ಯಾಸಕ ಸಿಬ್ಬಂದಿಗಳು ಹಾಗೂ ಎನ್ಎಸ್ ಎಸ್ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.ಗಾಳಿಪಟ ಹಾರಿಸುವುದು,ಭೂಮಿ ತಾಯಿಗೆ ಪೂಜೆ, ಬಾಗಿನ ಅರ್ಪಣೆ ಸೇರಿ ಹಲವಾರು ರೀತಿಯ ಸಾಂಪ್ರದಾಯಿಕ ಆಚರಣೆಗಳನ್ನು ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ಉಪನ್ಯಾಸಕರು ಕೂಡ ಮಕ್ಕಳಲ್ಲಿ ಮಕ್ಕಳಾಗಿ ಸಂಭ್ರಮಿಸಿ ತಮ್ಮ ಬಾಲ್ಯವನ್ನು ಮೆಲುಕು ಹಾಕಿದರು.
ಒಟ್ಟಿನಲ್ಲಿ ಕರೋನಾ ಕರಿನೆರಳಿನ ಭಯವನ್ನು ಬಿಟ್ಟು ಭಾರತೀಯ ಸಂಪ್ರದಾಯದಂತೆ ವಿದ್ಯಾರ್ಥಿಗಳು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಮುಂದಿನ ಪೀಳಿಗೆಗೆ ಹಬ್ಬದ ಮಹತ್ವವನ್ನು ಪ್ರದರ್ಶಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದು, ವಿದ್ಯಾರ್ಥಿಗಳ ಕಾರ್ಯಕ್ಕೆ ಕಾಲೇಜಿನ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
21/01/2021 04:15 pm