ಧಾರವಾಡ: ಕೊರೊನಾ ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಹೋರಾಡಿದ ವೈದ್ಯರು, ನರ್ಸಗಳು, ಆಶಾಗಳು, ಪೊಲೀಸರು, ಪತ್ರಕರ್ತರು ಸೇರಿದಂತೆ ಹತ್ತು ಜನರಿಗೆ ಧಾರವಾಡದ ಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಕೊರೊನಾ ಸೇನಾನಿ ಪ್ರಶಸ್ತಿ ಪ್ರದಾನ ಮಾಡಿದೆ.
ಧಾರವಾಡದ ರಂಗಾಯಣದ ಸುವರ್ಣ ಸಾಂಸ್ಕೃತಿ ಸಮುಚ್ಚಯ ಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡದ ಪಬ್ಲಿಕ್ ನೆಕ್ಸ್ಟ್ ಹಿರಿಯ ವರದಿಗಾರ ಪ್ರವೀಣ ಓಂಕಾರಿ, ಆಶಾ ಕಾರ್ಯಕರ್ತೆ ಮಹಾದೇವಿ ಜಾಲಿಕಟ್ಟಿ, ಪೌರಕಾರ್ಮಿಕೆ ರೇಷ್ಮಾ ಹವಾಲ್ದಾರ, ಸಂಚಾರ ಠಾಣೆ ಪೊಲೀಸ್ ಸಿದ್ದಪ್ಪ ಹುಗ್ಗಿ, ಸ್ವಯಂ ಸೇವಕಿ ಜಯಶ್ರೀ ಸೊಟಕನಾಳ, ಶುಶ್ರೂಷಕಿ ಆಶಾ ನಾಯಕ, ಸ್ವಯಂ ಸೇವಕ ಡಾ.ಬಾಪುಸಾಬ್ ಮೊರನಕರ, ಸ್ವಯಂ ಸೇವಕರಾದ ಕೆ.ಬಿ.ಮೇಟಿ ಹಾಗೂ ಉಮೇಶ ಮೇಟಿ ಅವರಿಗೆ ಕೊರೊನಾ ಸೇನಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಧಾರವಾಡದ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಜಯಂತ ಕೆ.ಎಸ್., ಸಾಯಿ ಕಾಲೇಜಿನ ಅಧ್ಯಕ್ಷೆ ಡಾ.ವೀಣಾ ಬಿರಾದಾರ, ಅನ್ನಪೂರ್ಣಾ ಗುರುಮಠ, ಕಾಲೇಜಿನ ಪ್ರಾಚಾರ್ಯ ನಾಗರಾಜ ಶಿರೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು
Kshetra Samachara
19/01/2021 06:30 pm