ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಮೊಂಬತ್ತಿ ಮೆರವಣಿಗೆ

ಧಾರವಾಡ: ಧಾರವಾಡದ ಇಟಿಗಟ್ಟಿ ಕ್ರಾಸ್ ಬಳಿ ಮೊನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಮಹಿಳೆಯರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಧಾರವಾಡದಲ್ಲಿ ಸೋಮವಾರ ರಾತ್ರಿ ಮೊಂಬತ್ತಿ ಮೆರವಣಿಗೆ ನಡೆಯಿತು.

ಹುಬ್ಬಳ್ಳಿ, ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾಭವನದಿಂದ ವಿವೇಕಾನಂದ ವೃತ್ತದವರೆಗೂ ಮೊಂಬತ್ತಿ ಮೆರವಣಿಗೆ ಮಾಡಲಾಯಿತು. ನರೇಂದ್ರ ಟೋಲಗೇಟ್ ನಿಂದ ಗಬ್ಬೂರು ಕ್ರಾಸ್ ವರೆಗೆ ರಸ್ತೆ ಅಗಲೀಕರಣ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.

ಹುಬ್ಬಳ್ಳಿ, ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ ಗೌರಿ, ಬ್ಲಾಕ್ ಅಧ್ಯಕ್ಷೆ ಸಂಗೀತಾ ಪೂಜಾರಿ, ಗೌರಿ ನಾಡಗೌಡ, ಚೇತನಾ ಲಿಂಗದಾಳ, ಅಕ್ಕಮ್ಮ ಕಂಬಳಿ, ಬಾಳಮ್ಮ ಜಂಗನವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : Nagesh Gaonkar
Kshetra Samachara

Kshetra Samachara

18/01/2021 10:37 pm

Cinque Terre

47.76 K

Cinque Terre

3

ಸಂಬಂಧಿತ ಸುದ್ದಿ