ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಸತತ ಪರಿಶ್ರಮದಿಂದ ಮಾತ್ರ ಕಾರ್ಯಸಾಧ್ಯ'

ಹುಬ್ಬಳ್ಳಿ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲಮಂದಿರದ ಮಕ್ಕಳಿಗೆ ನವೋದಯ ಪ್ರವೇಶ ಪರೀಕ್ಷೆಯ ಕುರಿತು ಓರಿಯಂಟೇಶನ್ ಉದ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡ ಹಾಗೂ ಜವಾಹರ ನವೋದಯ ವಿದ್ಯಾಲಯ, ಕ್ಯಾರಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಯಾರಕೊಪ್ಪದ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಓಂ ಪಂಕಜಾಕ್ಷನ್ ಅವರು, ನವೋದಯ ವಿದ್ಯಾಲಯವು ಒಂದು ಶಿಸ್ತುಬದ್ದ ರೂಪರೇಷೆಗಳನ್ನು ಹೊಂದಿ ನಡೆಯುವಂತಹ ಶಿಕ್ಷಣ ಸಂಸ್ಥೆಯಾಗಿದ್ದು, ಇಡೀ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸರ್ವೋತೋಮುಖ ಅಭಿವೃದ್ಧಿಗಾಗಿ ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೂ ಪಾಠ ಪ್ರವಚನ, ಪರಿಹಾರ ಭೋದನೆ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ. ಮತ್ತು ಸಮತೋಲನ ಆಹಾರವನ್ನು ಒದಗಿಸಲಾಗುತ್ತದೆ ಎಂದರು.

ಭಾರತ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ನಾನು ಕೂಡ ಗ್ರಾಮೀಣ ಭಾಗದಿಂದಲೇ ಬಂದಿರುವುದರಿಂದ ಶಿಕ್ಷಣ ಪಡೆಯಲು 6-7 ಕಿ.ಮೀ ವರೆಗೆ ನಡೆದು ಹೋಗುವಂತಹ ಪರಿಸ್ಥಿತಿ ಇತ್ತು. ಇಂತಹ ಎಲ್ಲಾ ಅಡೆ ತಡೆಗಳನ್ನು ಮೀರಿ ಒಂದು ಒಳ್ಳೆಯ ಶಿಕ್ಷಣ ಪಡೆದು ಈ ಸ್ಥಾನದಲ್ಲಿ ಕುಳಿತ್ತಿದ್ದೇನೆ. ಅದರಂತೆ ನೀವು ಸಹಿತ ಪ್ರಯತ್ನ ಪಟ್ಟಲ್ಲಿ ಒಂದು ಉತ್ತಮ ಸ್ಥಾನವನ್ನು ಪಡೆಯಬಹುದು ಎಂದರು. ಸತತ ಪರಿಶ್ರಮದಿಂದ ಮಾತ್ರ ಕಾರ್ಯಸಾಧ್ಯ. ಮಕ್ಕಳು ಗುಲಾಬಿ ಹೂವಿನಂತೆ ಬದುಕಬೇಕು. ಸಿಕ್ಕಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸಬೇಕು ಎಂಬ ಬಗ್ಗೆ ಪ್ರೇರಣಾ ಕಥೆಗಳ ಮೂಲಕ ಮಕ್ಕಳಿಗೆ ತಿಳಿ ಹೇಳಿದರು. ಈ ತರಬೇತಿ ಕಾರ್ಯಗಾರವನ್ನು ಸದುಪಯೋಗ ಪಡಿಸಿಕೊಂಡು ಜವಾಹರ ನವೋದಯ ವಿದ್ಯಾಲಯಕ್ಕೆ ಪ್ರವೇಶ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅನ್ನಪೂರ್ಣ ಸಂಗಳದ, ಧಾರವಾಡದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ದೀಪಾ ದಂಡವತಿ, ರಾಧಾ ಕಲಾಲ, ಶುಭಾ ಪರೀಟ, ಜವಾಹರ ನವೋದಯ ವಿದ್ಯಾಲಯದ ಸಹ ಶಿಕ್ಷಕಿ ಸರೋಜಾ ಇದ್ದರು.

Edited By : Vijay Kumar
Kshetra Samachara

Kshetra Samachara

02/01/2021 05:35 pm

Cinque Terre

10 K

Cinque Terre

0

ಸಂಬಂಧಿತ ಸುದ್ದಿ