ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಾಮಿಯೇ ಶರಣಂ ಅಯ್ಯಪ್ಪ..! ಹೋಗೋಣ ಬನ್ನಿ ಹುಬ್ಬಳ್ಳಿಯ ಶಬರಿಮಲೈಗೆ

ಹುಬ್ಬಳ್ಳಿ: ಜನವರಿ ತಿಂಗಳು ಪ್ರಾರಂಭ ಆಯ್ತು ಅಂದ್ರೇ ಸಾಕು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಹೋಗುವ ಕಾತುರ.ಆದ್ರೇ ಈ ಬಾರಿ ಶಬರಿ ಮಲೈಗೆ ಹೋಗಲು ಮಾತ್ರ ಸಾಧ್ಯವಾಗುತ್ತಿಲ್ಲ.ಹಾಗಿದ್ದರೇ ‌ವೃತ ಪೂರ್ಣಗೊಳಿಸಿ ಅಯ್ಯಪ್ಪನ ದರ್ಶನ ಪಡೆದುಕೊಳ್ಳಲು ಎಲ್ಲಿ ಹೋಗಬೇಕು ಅಂತೀರಾ ಹಾಗಿದ್ದರೇ ಬನ್ನಿ ನಮ್ಮ ಹುಬ್ಬಳ್ಳಿಯ ಅಯ್ಯಪ್ಪನ ದೇಗುಲಕ್ಕೆ..

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್ ನಲ್ಲಿರುವ ಅಯ್ಯಪ್ಪ ದೇಗುಲ ಕರ್ನಾಟಕದ ಶಬರಿ ಮಲೈ ಎಂದೇ ಖ್ಯಾತಿ ಪಡೆದಿದ್ದು, ಸಾವಿರಾರು ಭಕ್ತರಿಗೆ ದೀಕ್ಷೆ ನೀಡುರುವ ಪುಣ್ಯ ಕ್ಷೇತ್ರವಾಗಿ ಹುಬ್ಬಳ್ಳಿ ಶಿರೂರ ಪಾರ್ಕಿನ ಅಯ್ಯಪ್ಪ ಸ್ವಾಮಿ ದೇಗುಲ ಹೆಸರುವಾಸಿಯಾಗಿದೆ.

1994-95ರಲ್ಲಿ ಶಂಕುಸ್ಥಾಪನೆಗೊಡ ಈ ದೇಗುಲ ಈಗ ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದಲ್ಲಿಯೇ ಕರ್ನಾಟಕದ ಶಬರಿಮಲೈ ಎಂದೇ ಖ್ಯಾತಿ ಪಡೆದಿದೆ.

ಇನ್ನೂ ಶಬರಿಮಲೈ ಅಯ್ಯಪ್ಪನ‌ ದೇವಸ್ಥಾನದ ತದ್ರೂಪಿಯಾಗಿ‌ ನಿರ್ಮಾಣ ಮಾಡಲಾಗಿದ್ದು,ಮೂಲ ದೇವಾಲಯದ ಅಳತೆ ಗೋಲಿನಲ್ಲಿಯೇ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಕೋರೊನಾ‌ ಸಂದರ್ಭದಲ್ಲಿ ಶಬರಿಮಲೈ ಹೋಗಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಶಿರೂರ ಪಾರ್ಕ್ ಅಯ್ಯಪ್ಪ ದೇವಸ್ಥಾನ ಕರ್ನಾಟಕದ ಶಬರಿಮಲೈ ಆಗಿದೆ.

ಈಗಾಗಲೇ ಸಾವಿರಾರು ಭಕ್ತರು ತಮ್ಮ ವೃತವನ್ನು ಇಲ್ಲಿಂದಲೇ ಪ್ರಾರಂಭಿಸಿ ಮಾಲೆ ಧರಿಸಿಕೊಂಡು ಅಯ್ಯಪ್ಪನ‌ ವೃತ ಮಾಡಿದ್ದಾರೆ.ಈಗ ಪುನಃ ಇಲ್ಲಿಯೇ ದರ್ಶನಕ್ಕೆ ಬರುತ್ತಿರುವುದು ವಿಶೇಷವಾಗಿದೆ.

ಆನಂದ ಗುರುಸ್ವಾಮಿಯವರು ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆಯುವ ಪೂಜೆ ಪುರಸ್ಕಾರ ನೋಡುವುದೇ ಒಂದು ಸೌಭಾಗ್ಯ.ಮಕ್ಕಳು, ವೃದ್ಧರು,ಅಂಗವಿಕಲರು ಕೂಡ ಶಿರೂರ ಪಾರ್ಕ್ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತಿಯಿಂದ ಬೇಡಿಕೊಳ್ಳುವುದು ನಿಜಕ್ಕೂ ಭಕ್ತಿಭಾವವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತದೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಅಯ್ಯಪ್ಪನ ದೇಗುಲ ಕರ್ನಾಟಕದ ಶಬರಿಮಲೈ. ಇನ್ನೂ ಮಂಡಲ ಪೂಜೆ, ಸಂಕ್ರಮಣ ಪೂಜೆಗೆ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಲಾಗಿದ್ದು,ಈ ಬಾರಿ 25 ಸಾವಿರಕ್ಕೂ ಅಧಿಕ ಜನರು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಆನಂದ ಗುರುಸ್ವಾಮಿಯವರು.

ಹೊಸ ವರ್ಷದ ಹೊಸಿಲಿನಲ್ಲಿರುವ ಎಲ್ಲರಿಗೂ ಅಯ್ಯಪ್ಪ ‌ಸ್ವಾಮಿ ಆಶೀರ್ವದಿಸಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ..

Edited By :
Kshetra Samachara

Kshetra Samachara

02/01/2021 07:56 am

Cinque Terre

47.98 K

Cinque Terre

1

ಸಂಬಂಧಿತ ಸುದ್ದಿ