ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ

ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ಧರಣಿಯವರ ಓಣಿಯ ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮವನ್ನು ಕಲ್ಯಾಣಪುರ ಮಠದ ಬಸವಣ್ಣನವರು ಹಾಗೂ ಗುರುದೇವ ಬ್ರಹ್ಮಾನಂದ ಮಠದ ಶ್ರಿ ಗುರು ಸಿದ್ಧೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು.

ಕಾರ್ತಿಕ ಮಾಸದ ಅಂಗವಾಗಿ ವರಸಿದ್ಧಿ ವಿನಾಯಕನಿಗೆ ಹೂಗಳ ಅಲಂಕಾರ ನಡೆದರೇ ದೇವಸ್ಥಾನವನ್ನು ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಮದ ಹಿರಿಯರು ಮಕ್ಕಳು ಮಹಿಳೆಯರು ರಾತ್ರಿ ದೀಪ ಬೆಳಗಿಸಿ ದೇವರ ಕೃಪೆಗೆ ಪಾತ್ರರಾದರೇ, ಬೆಳಿಗ್ಗೆಯಿಂದಲೇ ವಿನಾಯಕನಿಗೆ ಪೂಜಾಭಿಷೇಕ ನೆರವೇರಿದವು.

ಸಂಶಿ ಗ್ರಾಮವಷ್ಟೇ ಅಲ್ಲದೆ ಸುತ್ತ ಮುತ್ತ ಹಳ್ಳಿಗಳ ಭಕ್ತರು ಆಗಮಿಸಿ ವಿಘ್ನೇಶ್ವರನ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾಗಿ ಪ್ರಸಾದ ಸವಿದರು.

Edited By : Nagesh Gaonkar
Kshetra Samachara

Kshetra Samachara

26/12/2020 03:31 pm

Cinque Terre

23.3 K

Cinque Terre

0

ಸಂಬಂಧಿತ ಸುದ್ದಿ