ಕಲಘಟಗಿ: ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು,ಮಕ್ಕಳು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ತ ಕಲಘಟಗಿ ಘಟಕದ ಅಧ್ಯಕ್ಷ ಡಾ ಸುರೇಶ ಕಳಸಣ್ಣವರ ತಿಳಿಸಿದರು.
ಸಾವಿತ್ರಿಬಾಯಿ ಫುಲೆ ಹೋರಾಟ,ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆಯ ವಿಷಯದ ಮೇಲೆ ೧೭ ವರ್ಷದೊಳಗಿನ
ಮಕ್ಕಳು ಪ್ರಬಂಧ ಬರೆಯಬೇಕು.
ಒಬ್ಬರು ಒಂದೆ ಪ್ರಬಂಧವನ್ನು ಕನ್ನಡದಲ್ಲಿ ಎ೪ ಅಳತೆಯ ಹಾಳೆಯಲ್ಲಿ ೩೦೦ ರಿಂದ ೪೦೦ ಪದಗಳಿಗೆ ಮಿಕ್ಕದಂತೆ
ರಚಿಸಿ,ಹೆಸರು ವಿಳಾಸ,ತರಗತಿ, ದೂರವಾಣಿ ಸಂಖ್ಯೆಯನ್ನು ಬರೆದು,
+91 72595 03164 ವಾಟ್ಸಪ್ ನಂಬರ್ ಗೆ ದಿನಾಂಕ ೨೮/೧೨/ ೨೦೨೦ ರ ಒಳಗಾಗಿ ಕಳುಹಿಸಬೇಕು,
ಕೊನೆಯ ದಿನಾಂಕದ ನಂತರ ಬಂದ ಪ್ರಬಂಧಗಳನ್ನು ಪರಿಗಣಿಸುವುದಿಲ್ಲ ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿಜೇತರಿಗೆ ಅಕ್ಷರದ ತಾಯಿ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದುಎಂದು ಡಾ ಸುರೇಶ ಕಳಸಣ್ಣವರ ತಿಳಿಸಿದರು.
Kshetra Samachara
26/12/2020 10:38 am