ವರದಿ: ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಸಾಕಷ್ಟು ಸ್ಟಾರ್ಟ್ ಅಫ್ ಗಳಿಗೆ ನೀರುಣಿಸಿ ಪ್ರೋತ್ಸಾಹಿಸುತ್ತಿರುವ ದೇಶಪಾಂಡೆ ಫೌಂಡೇಶನ್ ಈಗ ಮಹಿಳಾ ಸಬಲೀಕರಣ ಹಾಗೂ ಸೂಕ್ಷ್ಮ ಉದ್ಯಮಶೀಲತೆ ಅಭಿವೃದ್ಧಿಗಾಗಿ ಮತ್ತೊಂದು ಚಿಂತನೆ ನಡೆಸಿದ್ದು,ಈಗ ಉಡಾನ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಹೌದು...ಮಹಿಳಾ ಸಬಲೀಕರಣ, ಉತ್ತರ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಅಸೋಸಿಯೇಷನ್ ಹಾಗೂ ಇನ್ನರ್ ವೀಲ್ ಕ್ಲಬ್ ಸಹಯೋಗದೊಂದಿಗೆ ಈ ಮೇಳವನ್ನು ಆಯೋಜಿಸಲಾಗಿದ್ದು, ಸೂಕ್ಷ್ಮ ಉದ್ಯಮಶೀಲತೆ ಅಭಿವೃದ್ಧಿಯನ್ನು ಮಾಡುವ ಹಿನ್ನಲೆಯಲ್ಲಿ ಇಂತಹದೊಂದು ಕಾರ್ಯಕ್ರಮಕ್ಕೆ ದೇಶಪಾಂಡೆ ಫೌಂಡೇಶನ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇದೇ 23 ಮತ್ತು 24ರಂದು ಗೋಕುಲ ರಸ್ತೆಯಲ್ಲಿರುವ ಎನ್.ಕೆ.ಎಸ್.ಎಸ್.ಐ.ಎ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಇನ್ನೂ ರಾಜ್ಯದ ವಿವಿಧ ಮೂಲೆಗಳಿಂದ ಸೂಕ್ಷ್ಮ ಉದ್ಯಮಶೀಲತೆಯಲ್ಲಿ ಬದುಕು ಕಟ್ಟಿಕೊಂಡಿರುವ ಸಾಕಷ್ಟು ಜನ ಉದ್ಯಮಿಗಳು ಆಗಮಿಸಲಿದ್ದಾರೆ.
ಕರಕುಶಲ ಹಾಗೂ ಗುಡಿ ಕೈಗಾರಿಕಾಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಉದ್ಯಮಿಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಸೂಕ್ತ ವೇದಿಕೆ ಕಲ್ಪಿಸಲು ದೇಶಪಾಂಡೆ ಫೌಂಡೇಶನ್ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ಒಟ್ಟಿನಲ್ಲಿ ಸೂಕ್ಷ್ಮ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆಯಲು ಈ ಒಂದು ಮೇಳ ಸಾಕ್ಷಿಯಾಗಲಿದೆ.
Kshetra Samachara
21/10/2021 03:45 pm