ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ಭಕ್ತರ ಆರಾಧ್ಯ ದೈವ ಕರಿಶಿದ್ದೇಶ್ವರ ದೇಗುಲದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ಇಂದು ಸರಳ ಸಂಭ್ರಮ ಮತ್ತು ಶಾಸ್ತ್ರೋಕ್ತವಾಗಿ ನೆರವೇರಿತು.
ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡೊಳ್ಳಿನ ಮೇಳದವರು ಕೂರಿಗೆಯನ್ನು ಬಾಯಲ್ಲಿ ಹಿಡಿದು ಡೊಳ್ಳು ಬಾರಿಸುವ ದೃಶ್ಯ ರೋಮಾಂಚನ ಎನಿಸಿತು.
ಕರಿಶಿದ್ದೇಶ್ವರ ನೂತನ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು, ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು, ಕುಂದಗೋಳ ತಾಲೂಕಿನ ವಿವಿಧ ಮಠಾಧೀಶರು ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kshetra Samachara
05/02/2022 08:35 am