ಕುಂದಗೋಳ : ಧಾರಾವಾಡ ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿದ್ದ ಕುಂದಗೋಳನ್ನು ಅಭಿವೃದ್ಧಿ ಪಥದತ್ತ ಮುನ್ನೆಡೆಸಿದ ನಾವಿಕನೇ ಈ ಧೀಮಂತ ವ್ಯಕ್ತ ದಿವಂಗತ ಸಚಿವ ಸಿ.ಎಸ್.ಶಿವಳ್ಳಿ.
ಅಪ್ಪಟ ರೈತನ ಮಗ ಶಿವಳ್ಳಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊಟ್ಟ ಮೊದಲು ಬಾರಿಗೆ ವಿಧಾನಸಭೆ ಪ್ರವೇಶಿಸಿ ದಾಖಲೆ ಬರೆದರು. ಕುಂದಗೋಳ ತಾಲೂಕಿನ ಪ್ರತಿ ಹಳ್ಳಿಗಳ ಆಶಾಕಿರಣವಾಗಿ ಹೊರ ಹೊಮ್ಮಿ ಕಾಂಗ್ರೆಸ್ ಪಕ್ಷ ಸೇರಿ ಕುಂದಗೋಳದಲ್ಲಿ ಕೈ ಬಲಗೊಳಿಸಿ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದರು.
ಸದಾ ಜನ ಹಿತಕ್ಕಾಗಿ ಮಿಡಿಯುತ್ತಿದ್ದ ಶಿವಳ್ಳಿ ನೊಂದವರು, ದೀನ ದಲಿತರು, ವಯೋವೃದ್ಧರು, ಅಂಗವಿಕಲರ ಸೇರಿದಂತೆ ವಿಧವೆಯರಿಗೆ ಸಬಲರಾಗಲು ಸೌಲಭ್ಯ ಕಲ್ಪಿಸಿ ತನ್ನ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರ ಕಷ್ಟಕ್ಕೆ ತನ್ನ ಜೀವನವನ್ನೇ ಅರ್ಪಿಸಿದ ಶಿವಳ್ಳಿ ಅಪ್ಪಟ ಬಯಲುಸೀಮೆ ಹೈದ.
ಇಂದು ಅವರ 59ನೇ ಜನ್ಮದಿನ ಈ ಬಗ್ಗೆ ಶಾಸಕಿ ಕುಸುಮಾವತಿ ಶಿವಳ್ಳಿ ಮಾತೇನು ನೀವೆ ಕೇಳಿ...
ಒಟ್ಟಾರೆ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಮರೆಯಾದ್ರೂ ಅವರ ಮಾಡಿದ ಕಾರ್ಯಗಳಿಂದ ಅವರ ಆತ್ಮ ಕುಂದಗೋಳದಲ್ಲೇ ನೆಲೆ ಸಿದ್ದು ಸದಾ ಕ್ಷೇತ್ರದ ಅಭಿವೃದ್ಧಿಗಾಗಿ ಹಂಬಿಲಿಸುತ್ತಿದೆ.
ಓ ಕುಂದಗೋಳ ತಾಲೂಕಿನ ಬಂದು ಮಿತ್ರರೇ ನಿಮ್ಮ ಪರವಾಗಿ ದಿ.ಸಚಿವ ಸಿ.ಎಸ್.ಶಿವಳ್ಳಿಯವರಿಗೆ 59ನೇ ಜನ್ಮದಿನದ ಶುಭಾಶಯಗಳು.
Kshetra Samachara
12/11/2020 10:37 am