ನವಲಗುಂದ : ಪಟ್ಟಣದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ 16ನೇ ಜಯಂತಿಯನ್ನ ಗವಿಮಠದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ತಡಿ ಮಠದಲ್ಲಿರುವ ಲಿಂಗರಾಜರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ನಂತರ ಆಷಾರ್ ಶರೀಫ ದರ್ಗಾದಲ್ಲಿ ಪಿರಜಾಧೆ ಕುಟುಂಬದವರಿಂದ ಶಿರಸಂಗಿ ಲಿಂಗರಾಜರ ಜನ್ಮದಿನಾಚರಣೆ ಪ್ರಯುಕ್ತ ಪೂಜೆ ಸಲ್ಲಿಸಿ, ನಂತರ ಲಿಂಗರಾಜ ವೃತ್ತದಲ್ಲಿರುವ ಲಿಂಗರಾಜ ಮೂರ್ತಿಗೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳ ರೀತಿಯಲ್ಲಿ ಲಿಂಗರಾಜ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ, ಲಿಂಗರಾಜ ಸರದೇಸಾಯಿ, ನಿಂಗಣ್ಣ ಹಳ್ಳದ, ರಾಯನಗೌಡ ಪಾಟೀಲ, ಮಂಜುನಾಥ ಸುಭೇದಾರ, ನಾಗಪ್ಪ ಸಂಗಟಿ, ಬಸಣ್ಣ ಹರಿವಾಣ, ಬಸವರಾಜ ನರಗುಂದ, ಪ್ರಕಾಶ ಶಿಗ್ಲಿ, ದೇವೇಂದ್ರಪ್ಪ ಹಳ್ಳದ, ಅಪ್ಪಣ್ಣ ಹಳ್ಳದ, ಶಿವಪ್ಪ ಸಂಗಟಿ, ಶಿವಲಿಂಗಯ್ಯ ಕಲ್ಯಯನಮಠ, ಸಿದ್ದನಗೌಡ ಪಾಟೀಲ, ರವಿ ಹಳ್ಳದ, ಅಡಿವೆಪ್ಪ ಶಿರಸಂಗಿ, ಸಿದ್ದಪ್ಪ ಹಳ್ಳದ ಹಾಗೂ ಅನೇಕರು ಉಪಸ್ಥಿತರಿದ್ದರು.
Kshetra Samachara
10/01/2022 05:13 pm