ನವಲಗುಂದ : ನವಲಗುಂದ ಪಟ್ಟಣದಲ್ಲಿ ಶನಿವಾರ ಸಂಜೆ ನೂರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಸಾರ್ವಜನಿಕರಿಂದ ವೈಭವದ ಭವ್ಯ ಮೆರವಣಿಗೆಯನ್ನು ಅದ್ದೂರಿಯಿಂದ ನೆರವೇರಿಸಲಾಯಿತು.
ಇನ್ನು ಮಾಲಾಧಾರಿಗಳು ಸೇರಿದಂತೆ ಅನೇಕರು ಹೂವಿನ ಪುಷ್ಪಾರ್ಚನೆ ಮಾಡುವ ಮೂಲಕ ಕರಡಿ ಮಜಲು, ಶರಣು ಘೋಷಣೆ, ವೇಷಾಧಾರಿಗಳು ಸುಮಂಗಲೆಯರು ಹಾಗೂ ಪಂಜಿನ ವೈಭವದ ಮೆರವಣಿಗೆಯು ಅಣ್ಣಿಗೇರಿ ರಸ್ತೆ ಅಯ್ಯಪ್ಪ ಸ್ವಾಮಿ ಗುಡಿಯಿಂದ ಹೊರಟು ಬಸ್ ನಿಲ್ದಾಣ, ಗಣಪತಿ ಗುಡಿ, ವಿಠಲ ಮಂದಿರ, ಗಾಂಧಿ ಮಾರ್ಕೆಟ್, ಲಿಂಗರಾಜ ಸರ್ಕಲ್, ಮಾರ್ಗವಾಗಿ ಸನ್ನಿಧಿವರೆಗೆ ಮೆರವಣಿಗೆ ಸಾಗಿತು.
Kshetra Samachara
02/01/2022 11:56 am