ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 75 ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ

ನವಲಗುಂದ : ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದ ಎಚ್. ಕೆ & ಜಿ. ಕೆ. ಕೋನರಡ್ಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ವತಿಯಿಂದ 75ನೇ ಸುವರ್ಣ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳು 75 ಸಸಿಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಹೌದು ಕಾಲೇಜಿನ ಆವರಣದಲ್ಲಿ ಹಲವು ಬಗೆಯ ಸಸಿಗಳನ್ನು ಈ ಮೊದಲು ನೆಡಲಾಗಿತ್ತು. ಬೇವು, ಹೆಬ್ಬೇವು, ನೇರಳೆ, ಮಹಾಗನಿ, ಹುಣಸೆ, ಪೇರಲ, ಸಾಗವಾನಿ, ಅಶೋಕ ಗಿಡ.ಲ್, ಚರ್ಯಿ ಸೇರಿದಂತೆ ಅಲಂಕಾರಿಕ ಗಿಡಗಳು. ಮತ್ತು 30ಕ್ಕೂ ಹೆಚ್ಚು ಜಾತಿಯ 600ಕ್ಕೂ ಹೆಚ್ಚು ಮರಗಳನ್ನು ವಿದ್ಯಾರ್ಥಿಗಳ ಸಹಕಾರದಿಂದ ಈ ಹಿಂದೆ ನೆಟ್ಟು ಪೋಷಿಸಲಾಗುತ್ತಿದೆ.

ಇನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಪ್ರಾಚಾರ್ಯರಾದ ಪಿ.ಜೆ ಹಿರೇಮಠ ವಹಿಸಿದ್ದರು. ಊರಿನ ಹಿರಿಯರು ಬಸವರಡ್ಡಿ ಕೋನರಡ್ಡಿ ಹಾಗೂ ಇಕೋ ಕ್ಲಬ್ ನ ಮುಖ್ಯಸ್ಥರಾದ ಎಮ್. ಎಫ್ ಸಂದಿಗೋಡ ಹಾಗೂ ಕಾಲೇಜಿನ ಸಿಪಾಯಿಯಾದ ಸಂತೋಷ ಹೆಬ್ಬಾಳ ಅವರನ್ನು ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸನ್ಮಾನಿಸಿದರು.

Edited By : PublicNext Desk
Kshetra Samachara

Kshetra Samachara

25/06/2022 10:11 am

Cinque Terre

18.62 K

Cinque Terre

0

ಸಂಬಂಧಿತ ಸುದ್ದಿ