ಕಲಘಟಗಿ:ಪಟ್ಟಣದ ಗಾಂಧಿ ನಗರದಲ್ಲಿರುವ ಆಂಜನೇಯ ದೇವಸ್ಥಾನದ ಆವರಣವನ್ನು ಬಿಜೆಪಿ ನಗರ ಘಟಕದ ಪದಾಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಸ್ವಚ್ಚಗೊಳಿಸಿದರು.
ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿಯ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು,ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ,ಸುಣ್ಣ ಬಣ್ಣ ಹಚ್ಚಿ,ಸಸಿ ನೆಡಲಾಯಿತು.
ಜಿಲ್ಲಾ ಪ್ರ ಕಾ ಸದಾನಂದ ಚಿಂತಾಮಣಿ,ನಗರ ಘಟಕದ ಅಧ್ಯಕ್ಷ ಪರಶುರಾಮ ಹುಲಿಹೊಂಡ,ಬಸವರಾಜ ಹೊನ್ನಳ್ಳಿ,ಮೋಹನ ದಾಗಿನದಾರ,ವಿಕಾಸ ಹಿರೇಮಠ,ಶ್ರೀಕಾಂತ ಧಾರವಾಡ,ಸಿದ್ದಪ್ಪ ಹೆಬ್ಬಳ್ಳಿ, ವಿನಾಯಕ ಗೌಳಿ,ಆದರ್ಶ ಬೆಣ್ಣಿ,ವಿಶ್ವ ಹಸರಂಬಿ, ವಿನಾಯಕ ಗಾಯಕ್ವಾಡ, ಕೃಷ್ಣಾ ಲಮಾಣಿ,ಗಂಗಪ್ಪ ಗೌಳಿ ಉಪಸ್ಥಿತರಿದ್ದರು.
Kshetra Samachara
02/10/2020 04:06 pm