ಧಾರವಾಡ : ಕಸ್ತೂರಿ ಫೌಂಡೇಶನ್ ವತಿಯಿಂದ ನಗರದ ಬಣಶ್ರೀ ನಗರದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ತ್ರೀ ರೋಗ ತಜ್ಞರಾದ ಡಾ.ಸ್ಮಿತಾ ರಾಮನಗೌಡರ ಅವರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞರಾದ ಡಾ.ಸ್ಮಿತಾ ರಾಮನಗೌಡರ ಅವರು ಮಹಿಳೆಯರು ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಕಿವಿ ಮಾತನ್ನು ಹೇಳಿದರು. ಈ ವೇಳೆ ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಮಹಿಳೆಯರು ಮತ್ತು ಮಕ್ಕಳು ಹಾಡಿಗೆ ಸಕ್ಕತ್ ಸ್ಟೆಪ್ ಹಾಕುವ ಮೂಲಕ ಸಂಭ್ರಮ ಪಟ್ಟರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಕಲ್ಮೇಶ ತಳವಾರ, ಶಶಿಕಲಾ ಹೆಬ್ಳಿಕರ, ಅರುಣಾ ಸುರೇಶ ಪವಾರ, ಜ್ಯೋತಿ ಎಂ ಹಿರೇಮಠ, ಶೋಭಾ ಭೂಮರೆಡ್ಡಿ, ಚಂದ್ರಿಕಾ ನಾಯ್ಕ, ರೇಖಾ ಪೂಜಾರ, ಸಂಗೀತ ಪವಾರ, ಸುಜಾತಾ ಬಡಿಗೇರ, ವಿಶಾಲಾಕ್ಷಿ ಪಾಟೀಲ, ಸೀಮಾ, ಪ್ರಿಯಾ ಸೇರಿದಂತೆ ಹಲವರು ಇದ್ದರು.
Kshetra Samachara
16/03/2022 09:57 pm