ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಕ್ಕಲ ಗ್ರಾಮದ ಬಾಹುಬಲಿ: ಟ್ರ್ಯಾಕ್ಟರ್ ಏಳೆಯುವ ಖದರ್ ನೋಡಿದರೇ ನೀವು ಬೆರಗಾಗುತ್ತಿರಾ..!

ಹುಬ್ಬಳ್ಳಿ: ಅಧುನಿಕ ಯುಗದಲ್ಲಿ ಕಸರತ್ತು ಕಣ್ಮರೆಯಾಗುತ್ತಿವೆ. ನಾವೆಲ್ಲ ಸಾಹಸ ಪ್ರದರ್ಶನಗಳನ್ನು ಡೂಫ್ ಹಾಕುವ ಸಿನಿಮಾಗಳಲ್ಲಿ ನೋಡುತ್ತಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಾಹಸದಿಂದ ಜನರನ್ನು ಬೆರಗಾಗುವಂತೆ ಮಾಡಿದ್ದಾನೆ. ಹಾಗಿದ್ದರೇ ಯಾರು ಆ ವ್ಯಕ್ತಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್...

ಹೀಗೆ ಹೆಗಲಿಗೆ ಹಗ್ಗ ಹಾಕಿಕೊಂಡು ಟ್ರ್ಯಾಕ್ಟರ್ ಎಳೆಯುತ್ತಿರುವ ವ್ಯಕ್ತಿಯ ಸಾಹಸವನ್ನು ನೋಡಿದರೇ ಎಂತವರು ಕೂಡ ಬೆರಗಾಗುತ್ತಾರೆ.‌ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ನಿಂತಿರುವ ಬೈಕ್ ತಳ್ಳಿಕೊಂಡು ಬರಲು ಹೆಣಗಾಡುವ ದಿನಮಾನಗಳಲ್ಲಿ ಈ ವ್ಯಕ್ತಿ ನೂರಾರು ಕೆಜಿ ತೂಕದ ಟ್ರ್ಯಾಕ್ಟರ್ ಅನ್ನು ತನ್ನ ಹೆಗಲಿಗೆ ಹಗ್ಗ ಕಟ್ಟಿಕೊಂಡು ಎಳೆಯುವ ಮೂಲಕ ಸಾಹಸ ಪ್ರದರ್ಶನ ಮಾಡಿದ್ದಾರೆ. ಹೌದು.. ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದ ವ್ಯಕ್ತಿ ಕೃಷ್ಣಪ್ಪ ಮಾದೇವಪ್ಪ ಕಲಘಟಗಿ ಎಂಬುವವರೇ ಟ್ರ್ಯಾಕ್ಟರ್ ಎಳೆದು ಸಾಹಸ ಪ್ರದರ್ಶನ ಮಾಡಿದ್ದಾರೆ.

ಮುಂಡಗೋಡ ತಾಲ್ಲೂಕಿನ ಇಂದೂರ ಕೊಪ್ಪ ಗ್ರಾಮದಲ್ಲಿ ಟ್ರ್ಯಾಕ್ಟರ್ ಎಳೆಯುವ ಸ್ಪರ್ಧೆಯಲ್ಲಿ 1ನಿಮಿಷದಲ್ಲಿ 1ನೂರ ಮೂವತ್ತು ಫೂಟ್ ಎಳೆಯುವ ಮೂಲಕ ಎಲ್ಲರ ಕಣ್ಣು ತನ್ನತ್ತ ನೋಡುವಂತೆ ಮಾಡಿದ್ದಾನೆ. ಇನ್ನೂ ಮುಕ್ಕಲ್ ಗ್ರಾಮದ ಯುವ ಉತ್ಸಾಹಿ ಕೃಷ್ಣಪ್ಪ ಅವರನ್ನು ಮುಕ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗರೆಡ್ಡಿ ನಡುವಿನಮನಿ ನೇತೃತ್ವದಲ್ಲಿ ಗ್ರಾಮಸ್ಥರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಹೆಗಲಿಗೆ ಹಗ್ಗ ಕಟ್ಟಿಕೊಂಡು ಟ್ರ್ಯಾಕ್ಟರ್ ಎಳೆದಿರುವ ಈ ಬಾಹುಬಲಿ ಸಾಹಸ ಎಲ್ಲೆಡೆಯೂ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ವ್ಯಕ್ತಿಯ ಸಾಧನೆ‌ಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Edited By : Shivu K
Kshetra Samachara

Kshetra Samachara

14/09/2021 01:55 pm

Cinque Terre

24.91 K

Cinque Terre

1

ಸಂಬಂಧಿತ ಸುದ್ದಿ