ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಪ್ಲಾಸ್ಟಿಕ್ ಧ್ವಜಗಳ ಹಾವಳಿ ತಪ್ಪಿಸಲು ಧಾರವಾಡದ ದಂಪತಿಗಳು ಮಾಡಿದ ಐಡಿಯಾ ನೋಡಿ..!

ಪಬ್ಲಿಕ್ ನೆಕ್ಸ್ಟ್ ವಿಶೇಷ ಪ್ರಶಾಂತ ಲೋಕಾಪುರ

ಧಾರವಾಡ : ಸ್ವಾತಂತ್ರ್ಯೊತ್ಸವ ದಿನಾಚರಣೆ ಬಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮದಿಂದ ಕೂಡಿರುತ್ತದೆ.ಇನ್ನೊಂದೆಡೆ ಪ್ಲಾಸ್ಟಿಕ್ ಧ್ವಜಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತವೆ.ಸಂಭ್ರಮ ಮುಗಿದ ನಂತರ ಪ್ಲಾಸ್ಟಿಕ್ ಧ್ವಜವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ.ಇವುಗಳಿಗೆ ಬ್ರೇಕ್ ಹಾಕಲು ಧಾರವಾಡದ ದಂಪತಿ ಪರಿಸರಸ್ನೇಹಿ ಸೀಡ್ ಪೇಪರ್‌ ಫ್ಲ್ಯಾಗ್ ಸಿದ್ಧಪಡಿಸಿದ್ದಾರೆ.

ಹೌದು! ಸ್ವಾತಂತ್ರ್ಯೊತ್ಸವ ದಿನಾಚರಣೆ ಹಾಗೂ ಜನವರಿ 26 ಬಂದ್ರೆ ಸಾಕು ಎಲ್ಲೆಂದರಲ್ಲಿ ರಾಷ್ಟ್ರ ಧ್ವಜದ ಸಂಭ್ರಮ ಇನ್ನೊಂದೆಡೆ ಪ್ಲಾಸ್ಟಿಕ್ ಧ್ವಜದ ಹಾವಳಿ ಹೆಚ್ಚಾಗಿ ಕಂಡುಬರುತ್ತದೆ. ಹೀಗೆ ಸ್ವಾತಂತ್ರ್ಯೋತ್ಸವ ಆಚರಣೆ ನೆಪದಲ್ಲಿ ಪರಿಸರ ಹಾಳಾಗುವುದನ್ನು ತಪ್ಪಿಸಲು ಈ ಹೊಸ ಪ್ಲಾನ್ ಮಾಡಿದ್ದು,ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ಕೆ.ಸಿ.ಪಾರ್ಕ್‌ನ ನಿವಾಸಿಗಳಾದ ಅಕ್ಷತಾ ಭದ್ರಣ್ಣ ಹಾಗೂ ರಾಹುಲ್ ಪಾಗಾದ್ ದಂಪತಿ ತಯಾರಿಸಿರುವ ಸೀಡ್‌ಪೇಪರ್‌ ಫ್ಲ್ಯಾಗ್ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.ರದ್ದಿ ಪೇಪರ್‌ ಹಾಗೂ ಹಳೇ ಬಟ್ಟೆಗಳನ್ನು ಪುನರ್‌ಬಳಸಿ ಅದರೊಳಗೆ ತುಳಸಿ,ಜಾಸ್ಮಿನ್,ಟೊಮೆಟೋ ಬೀಜಗಳನ್ನು ಇಟ್ಟು ಫ್ಯಾಗ್ ತಯಾರಿಸಿದ್ದಾರೆ.

ಈಗಾಗಲೇ 10 ಸಾವಿರ ಧ್ವಜಗಳು ಹಾಗೂ ಸಾವಿರ ಕೈಪಟ್ಟಿಗಳನ್ನು ಸಿದ್ಧಪಡಿಸಿ ಪರಿಸರಸ್ನೇಹಿ ಶಾಪ್‌ಗಳಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ.ಈ ದಂಪತಿ ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಲೆಂದೇ ಡೊಪೊಲ್ಲಿ ಹೆಸರಿನಡಿ ಆರಂಭಿಸಲಾದ ಪುನರ್ಬಳಕೆ ವಸ್ತುಗಳಿಗೆ ಜನರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಸಂಸ್ಥಾಪಕಿ ಅಕ್ಷತಾ ಭದ್ರಣ್ಣ,ಆನ್ಲೈನ್ ಲಭ್ಯ ಫ್ಲಾಗ್‌ಗಳು , ಬ್ಯಾಂಡ್‌ಗಳು ಲಭ್ಯವಿದೆ . www.dopolgy.com ಖರೀದಿಸಬಹುದು.

Edited By : Nagesh Gaonkar
Kshetra Samachara

Kshetra Samachara

14/08/2021 07:42 pm

Cinque Terre

36.98 K

Cinque Terre

1

ಸಂಬಂಧಿತ ಸುದ್ದಿ