ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತೊದಲು ನುಡಿಯ 5 ವರ್ಷದ ಈ ಪೋರಿಗೆ ವಲ್ಡ್ ರೆಕಾರ್ಡ್ ಅಬ್ಬಾ ಏನಿದು ಸಾಧನೆ ?

ಕುಂದಗೋಳ : ನೀವು ಕೇಳೊ ಯಾವುದೇ ರಾಜ್ಯ, ದೇಶ, ವಿದೇಶ, ಅಂತಾರಾಷ್ಟ್ರೀಯ ಮಟ್ಟದ ಪ್ರಶ್ನೇಗಳಿಗೆ ಈ ಪೋರಿ ಅಳ್ಳು ಹುರಿದಂತೆ ಉತ್ತರ ಕೊಡ್ತಾಳೆ. ಕಲೆ, ಸಾಹಿತ್ಯ, ಕ್ರೀಡೆ, ವೇದಗಳು ಸೇರಿದಂತೆ ಭಾರತವನ್ನಾಳಿದ ಬ್ರೀಟಿಷರಿಂದ ಹಿಡಿದು ಕದಂಬರು, ಮೌರ್ಯರು, ಶಾತವಾಹನರು, ಹೊಯ್ಸಳರ ಪರಂಪರೆ ಬಗ್ಗೆ ಕೊಡೋ ಉತ್ತರಗಳು ಈ ಎಳೆ ವಯಸ್ಸಿನಲ್ಲಿ ಅಸಾಧ್ಯದ ಮಾತು ಎನ್ನಂಗಿಲ್ಲ ಸಾಧ್ಯ ಎನ್ಬೇಕು ನೋಡಿ.

ಅಂದಹಾಗೇ ಈ ಪೋರಿ ಹೆಸರು ಶ್ರೀಶಾ ಈಶ್ವರ ಮುದಗಣ್ಣನವರ ತನ್ನ 5 ನೇ ವಯಸ್ಸಿಗೆ ಜನರಲ್ ನಾಲೇಡ್ಜ್ ಉತ್ತರ ಕೊಡುವ ಮೂಲಕವೇ 24 ಅಕ್ಟೋಬರ್ 2020 ವಲ್ಡ್ ರೆಕಾರ್ಡ್ ಪ್ರಶಸ್ತಿ ಪಡೆದಿದ್ದು, ಈ ಮೊದಲು ಫೆಬ್ರುವರಿ 2020 ರಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಭಾಜನವಾಗಿ ತಾನು ಓದುತ್ತಿರೋ ಕುಂದಗೋಳ ಪಟ್ಟಣದ ಸನ್ ಸೈನ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ಬಳಗವಲ್ಲದೆ ತಂದೆ ಈಶ್ವರಪ್ಪ, ತಾಯಿ ಅರುಣಾ, ಕುಟುಂಬಕ್ಕೆ ಕೀರ್ತಿ ತಂದು ಮುದ್ದು ಮಗಳು ಹಾಗಾದ್ರೇ ಅವಳ ಮಾತನ್ನೊಮ್ಮೆ ಕೇಳಿ.

ಇಷ್ಟೇಲ್ಲಾ ಸಾಧನೆಗೆ ಯಾರಪ್ಪ ಸ್ಪೂರ್ತಿ ಅಂದ್ರಾ ? ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು ಅನ್ನುವ ಮಾತೇ ನೋಡಿ, ಈ ತಾಯಿ ನೀಡಿದ ಶಿಕ್ಷಣಕ್ಕೆ ಭದ್ರ ಅಡಿಪಾಯ ಹಾಕಿದವರು ಈ ಸನ್ ಶೈನ್ ಸ್ಕೂಲ್ ಆಡಳಿತ ಮಂಡಳಿ ಹಾಗೂ ಶಿಕ್ಷಕ ಬಳಗ ಆ ಶಿಕ್ಷಕರ ಮಾತೇನು ಕೇಳ್ಬಿಡಿ.

ಈ ಕೊರೊನಾ ಬಂತು, ಶಾಲೆ ಬಾಗಿಲು ಮುಚ್ಚಿತ್ತು ಅಂತಾ ಅದೆಷ್ಟೋ ಮಕ್ಕಳು ಪಾಠ ಗೋಡೆವೆ ಬಿಟ್ಟು ಆಟಕ್ಕೆ ಬಿದ್ರೇ ಈ ಮಗು ಅದೆ ಸಮಯದಲ್ಲಿ ವಲ್ಡ್ ರೆಕಾರ್ಡ್ ಮಾಡಿದೆ. ಪಾಲಕರೇ ನಿಮ್ಮ ಮಕ್ಕಳನ್ನು ಇದೇ ರೀತಿ ತಯಾರಿ ಮಾಡಲು ಶ್ರೀಶಾ ಸಾಧನೆಯ ಈ ಸ್ಟೋರಿ ಸಾಕಲ್ವಾ.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

13/11/2020 09:12 am

Cinque Terre

55.79 K

Cinque Terre

18

ಸಂಬಂಧಿತ ಸುದ್ದಿ