ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಹೋದರಿಯರಿಬ್ಬರ ಬಹುಮುಖ ಪ್ರತಿಭೆ ಅನಾವರಣ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹೀಗೆ ಜಿಮ್ನಾಸ್ಟಿಕ್ಸ್ ನಲ್ಲಿ ಒಬ್ಬಳು ಮಿಂಚುತ್ತಿದ್ದರೇ ಇನ್ನೊಬ್ಬಳು ಪಾಶ್ಚಿಮಾತ್ಯ ಹಾಗೂ ಜಾನಪದ ನೃತ್ಯದಲ್ಲಿ ಎಲ್ಲರ ಗಮನ ಸೇಳೆಯುತ್ತಿದ್ದಾಳೆ ಇವರು ಮೂಲತಃ ಅವಳಿ ನಗರದ ನಿವಾಸಿಯಾದ ಶೋಭಾ ವಿನೋದಕುಮಾರ ಸಜ್ಜನ ಅವರ ಪುತ್ರಿಯರು. ರಚಿತಾ ಹಾಗೂ ಋತು ಸಜ್ಜನ ಇವರಿಬ್ಬರು ಉಭಯ ಸಹೋದರಿಯರು.ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತ. ಪೋಷಕರಲ್ಲಿ ಸಂತಸ ಮೂಡಿಸಿದ್ದಾರೆ.....

ಇನ್ನು ದೊಡ್ಡ ಮಗಳಾದ ರಚಿತಾ ಪಾಶ್ಚಿಮಾತ್ಯ ಹಾಗೂ ಜಾನಪದ ನೃತ್ಯದಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವುದರ ಜೊತೆಗೆ ಜಿಮ್ನಾಸ್ಟಿಕ್ಸ್ ನಲ್ಲಿ ಏರೋಬಿಕ್ ಸಹ ಕಲಿಯುತಿದ್ದಾಳೆ. ಅದೇ ರೀತಿ ಚಿಕ್ಕ ಮಗಳು ಋತು ಕೂಡ, ಮಾಡಲಿಂಗ್ ಅಷ್ಟೇ ಅಲ್ಲದೇ, ಅಹಲ್ಲಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ 5 ಸ್ಥಾನ, ರಾಜಸ್ಥಾನದಲ್ಲಿ 3 ನೇ ಸ್ಥಾನ, ಹಾಗೂ ಚೈನೈದಲ್ಲಿ 24 ನೇ ಸ್ಥಾನ ಪಡೆದಿದ್ದಾಳೆ. ರಾಷ್ಟ್ರೀಯ, ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಚಿಕ್ಕ ವಯಸಿನಲ್ಲಿಯೇ ಸಾದನೆಯ ಶಿಖರ ಏರುತ್ತಿದ್ದಾಳೆ....

ಒಟ್ಟನಲ್ಲಿ ಪಾಲಕರು ಮಕ್ಕಳಿಗೆ ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿ, ಉತ್ತಮ ಸಾಧನೆಗೆ ದಾರಿ ದೀಪ ಆಗಬೇಕಾಗಿದೆ........!

Edited By : Manjunath H D
Kshetra Samachara

Kshetra Samachara

01/11/2020 10:53 am

Cinque Terre

37.41 K

Cinque Terre

4

ಸಂಬಂಧಿತ ಸುದ್ದಿ