ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಭಾರತದ ಶಾಸ್ತ್ರೀಯ ನೃತ್ಯ ಪದ್ಧತಿಗಳಲ್ಲಿ ಭರತನಾಟ್ಯಕ್ಕೆ ತನ್ನದೇ ಆದ ಹೆಸರು ಇದೆ. ಈ ಕಲೆಗೆ ಕರ್ನಾಟಕದಲ್ಲಿ ಎಲ್ಲಿಲ್ಲದ ಬೇಡಿಕೆ. ಆದರೆ ಕೊರೊನಾದಿಂದ ಈ ಕ್ಷೇತ್ರವು ಸ್ತಬ್ದಗೊಂಡಿದ್ದು, ಇದೀಗ ಲಾಕ್ ಡೌನ್ ತೆರವು ಗೊಂಡಿದ್ದು ಮತ್ತೇ ಭರತನಾಟ್ಯ ಕಾರ್ಯಕ್ರಮ ಚೇತರಿಕೆ ಕಾಣುತ್ತಿದ್ದು, ಕಲಾವಿದರು ಸಂತಸಗೊಂಡಿದ್ದಾರೆ....
ಹೌದು, ಕಳೆದ 35 ವರ್ಷಗಳಿಂದ ಚಂದ್ರಕಾಂತ ನಗರದಲ್ಲಿರುವ, ಉರ್ಮಿಳಾ ಪಾತ್ರ ಅವರ ಶಿವಶಕ್ತಿ ಭರತನಾಟ್ಯ ಕಲಾಕೇಂದ್ರ ಭರತನಾಟ್ಯ ಕಲಿಸುತ್ತಾ ಬಂದಿದೆ. ಈ ಕಲಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಅದೆಷ್ಟೋ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ಹಲವಾರು ಸಾಧನೆಯ ಮಾಡಿದ್ದಾರೆ. ಆದ್ರೆ ಕೊರೊನಾ ಎಂಬ ಮಹಾಮರಿಯಿಂದ ಕಳೆದ ಆರು ತಿಂಗಳಿನಿಂದ ಯಾವುದೇ ರೀತಿಯ ಕ್ಲಾಸ್ ನಡೆಯದ ಕಾರಣ ನೃತ್ಯ ಕಲಾಕೇಂದ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದವು, ಸದ್ಯ ಲಾಕ್ ಡೌನ್ ಪುನಃ ಆರಂಭದ ಹಿನ್ನೆಲೆ ಮತ್ತೆ ತರಬೇತಿ ಪಡೆದುಕೊಳ್ಳಲು ಮಕ್ಕಳು ಆಗಮಿಸಿರುವುದಕ್ಕೆ ಶಿವಸಕ್ತಿ ಕಲಾ ಕೇಂದ್ರದ ಶಿಕ್ಷಕರು ಸಂತಸಗೊಂಡಿದ್ದಾರೆ.
ಮನೆಯಲ್ಲಿಯೇ ಇದ್ದ, ವಿದ್ಯಾರ್ಥಿಗಳು, ಲಾಕ್ ಡೌನ್ ಸಡಲಿಕೆಯ ನಂತರ ಭರತನಾಟ್ಯ ಕ್ಲಾಸ್ ಗಳು ಆರಂಭವಾದ ಕೂಡಲೆ ಸಂತಸಗೊಂಡು ಮೊದಲೇ ಕ್ಲಾಸ್ ಗೆ ಹಾಜರಾಗಿದ್ದಾರೆ...
ಒಟ್ಟಿನಲ್ಲಿ ಕೊರೋನಾದಿಂದ ನಿಂತು ಹೋಗಿದ್ದ ಭರತನಾಟ್ಯ ತರಭೇತಿ ಕೇಂದ್ರಗಳು ಇದೀಗ ಎಂದಿನಂತೆ ಮತ್ತೆ ಕಾರ್ಯಾರಂಭ ಮಾಡಿದ್ದು, ಕಲಾವಿದರು ಉತ್ಸಾಹದಿಂದ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ....!
Kshetra Samachara
26/09/2020 03:01 pm