ನವಲಗುಂದ: ಆಗಸ್ಟ್ 15 ಸೋಮವಾರ ಬೆಳಿಗ್ಗೆ ಲಾಲಗುಡಿ ಶ್ರೀ ಮಾರುತಿ ದೇವಸ್ಥಾನದಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಡೊಳ್ಳಿನ ಮೇಳದೊಂದಿಗೆ ಗಾಂಧಿ ಮಾರ್ಕೆಟ್‍ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಮಾಜಿ ಸಚಿವ ಕೆ.ಎನ್ ಗಡ್ಡಿ ಅವರು ತಿಳಿಸಿದರು.
ನವಲಗುಂದ ಪಟ್ಟಣದ ಲೋಕೊಪಯೋಗಿ ಇಲಾಖೆಯ ಅತಿಥಿ ಸಭಾಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ 226ನೇ ಜಯಂತೋತ್ಸವವನ್ನು ಭವ್ಯ ಮೆರವಣಿಗೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಸಂಜೆ 4 ಗಂಟೆಗೆ ಗಾಂಧಿ ಮಾರುಕಟ್ಟೆಯಲ್ಲಿ ಸಮಾರಂಭ ಜರುಗಲಿದ್ದು, ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗವಿಮಠದ ಬಸವಲಿಂಗ ಸ್ವಾಮೀಜಿ ಹಾಗೂ ನಾಗಲಿಂಗಸ್ವಾಮಿ ಮಠದ ವೀರಯ್ಯ ಸ್ವಾಮೀಜಿಯವರು ವಹಿಸಲಿದ್ದಾರೆ. ಜಮಖಂಡಿಯ ಜಕ್ಕನೂರಮಠ ಶೀ ಸಿದ್ರಾಶ್ರಮದ ಡಾ.ಮಾದುಲಿಂಗ ಮಹಾರಾಜರು ಪೂಜ್ಯ ವಿಶೇಷ ಆಹ್ವಾನಿತರು ಹಾಗೂ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುರುಬ ಸಮಾಜದ ಯಲ್ಲಮ್ಮ ನಾಯ್ಕರ, ಪರಶುರಾಮ ದಿವಾನದವರ, ಶಿವಾನಂದ ಕರಿಗಾರ, ವಿನೋದ ಅಸೂಟಿ, ಅರುಣಕುಮಾರ ಮಜ್ಜಗಿ, ಮಾಲತೇಶ ಗೊರವರ, ಈಶ್ವರ ಕಾಳಪ್ಪನವರ, ಬಸವರಾಜ ಮಲಕಾರಿ, ದೇವರಾಜ ಕಂಬಳಿ, ರಾಜೇಶ್ವರಿ ಸಾಲಗಟ್ಟಿ, ಯೋಗಪ್ಪ ಗೋಲನಾಯ್ಕರ, ಪ್ರೇಮಾ ಹತ್ತಿಕಟಗಿ, ಕುಮಾರ ಬ್ಯಾಹಟ್ಟಿ, ಹನಮಂತಪ್ಪ ಮರಲಕ್ಕನ್ನವರ ಉಪಸ್ಥಿತರಿರುವರೆಂದು ತಿಳಿಸಿದರು.
ತಾಲೂಕಿನ ಕುರುಬ ಸಮಾಜದವರು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿಗಳು 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 226 ನೇ ಸಂಗೋಳ್ಳಿ ರಾಯಣ್ಣನ ಜಯಂತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾಜಿ ಸಚಿವ ಕೆ.ಎನ್ ಗಡ್ಡಿ ತಿಳಿಸಿದರು.
Kshetra Samachara
14/08/2022 01:22 pm