ನವಲಗುಂದ : ನವಲಗುಂದ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ, ವರ್ಗಾವಣೆಗೊಂಡ ನಾಲ್ಕು ಪೋಲೀಸ್ ಸಿಬ್ಬಂದಿಯವರನ್ನು ನವಲಗುಂದ ನಗರದ ಠಾಣೆಯಲ್ಲಿ ಸಿಪಿಐ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಗೌರವಿಸಿ, ಬೀಳ್ಕೋಡಲಾಯಿತು.
ಹೌದು ಕಳೆದ ಹಲವು ವರ್ಷಗಳಿಂದ ನವಲಗುಂದ ಪೋಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ ಎಎಸ್ಐ ಡಿ. ಬಿ ಪಾಟೀಲ, ಹೆಡ್ ಕಾನ್ಸ್ಟೇಬಲ್ ವೈ.ಡಿ ಗಿರಿಯಪ್ಪನವರ, ಕಾನ್ಸ್ಟೇಬಲ್ ಬಸವರಾಜ ಬಣಟ್ಟಿ, ಕಾನ್ಸ್ಟೇಬಲ್ ಮುತ್ತು ಮಲ್ಲಿಗವಾಡ ಅವರು ವರ್ಗಾವಣೆಗೊಂಡಿದ್ದು, ಅವರಿಗೆ ಸನ್ಮಾನಿಸಿ, ಬೀಳ್ಕೋಡಲಾಯಿತು.
ಇನ್ನು ಕಾನ್ಸ್ಟೇಬಲ್ ಬಸವರಾಜ ಬಣಟ್ಟಿ ಅವರು ಧಾರವಾಡ ಸೈಬರ್ ಗೆ ವರ್ಗಾವಣೆಗೊಂಡಿದ್ದು, ಹೆಡ್ ಕಾನ್ಸ್ಟೇಬಲ್ ವೈ.ಡಿ ಗಿರಿಯಪ್ಪನವರ ಗುಡಿಗೇರಿ, ಎಎಸ್ಐ ಡಿ. ಬಿ ಪಾಟೀಲ ಕಲಘಟಗಿ ಹಾಗೂ ಕಾನ್ಸ್ಟೇಬಲ್ ಮುತ್ತು ಮಲ್ಲಿಗವಾಡ ಅಣ್ಣಿಗೇರಿಗೆ ವರ್ಗಾವಣೆಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಸಿಪಿಐ ಚಂದ್ರಶೇಖರ ಮಠಪತಿ ಸೇರಿದಂತೆ ನವಲಗುಂದ ಪೋಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
25/06/2022 12:53 pm