ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯ್ತು ಸರ್ಕಾರಿ ಶಾಲೆ

ಕುಂದಗೋಳ : ಮಕ್ಕಳಲ್ಲಿರುವ ಪ್ರತಿಭೆ ಅನಾವರಣ ಆಗ್ಬೇಕು, ಅವರಿಗೂ ಸ್ಪರ್ಧಾ ಮನೋಭಾವನೆ ಬೆಳೆಯಬೇಕು, ಒಬ್ಬರಿಗೊಬ್ಬರು ಪ್ರತಿ ಸ್ಪರ್ಧೆ ನೀಡಬೇಕು ಅಂದ್ರೇ ಅದಕ್ಕೆ ಒಂದು ಸೂಕ್ತ ವೇದಿಕೆ ಬೇಕು ಅಂತಹ ವೇದಿಕೆಯನ್ನು ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದ ಶಿಕ್ಷಕರು ಮಕ್ಕಳಿಗೆ ಕಲ್ಪಿಸಿಕೊಟ್ಟು ಅವರಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿದ್ದಾರೆ.

ಹೌದು ! ಕಡಪಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಕೋವಿಡ್ ಕಳೆದು ಆರಂಭವಾದ ಶಾಲಾ ಮಕ್ಕಳಲ್ಲಿ, ಹೊಸ ಉತ್ಸಾಹದ ಜೊತೆ ತರಗತಿ ಹೊಂದಿಕೊಳ್ಳಲು ಇಂತಹದ್ದೊಂದು ಕಾರ್ಯಕ್ರಮ ನಡೆಸಿ ಹಾಡು, ಕುಣಿತ, ಪ್ಯಾಶನ್, ಮ್ಯೂಸಿಕಲ್ ಚೇರ್, ರಸಪ್ರಶ್ನೆ, ಆಟೋಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಪ್ಪಟ ಗ್ರಾಮೀಣ ಸೊಬಗಿನ ಉಡುಗೆತೊಟ್ಟು ಮಕ್ಕಳು ಮಿಂಚುವಂತೆ ಮಾಡಿದ್ದಾರೆ.

ಇನ್ನೂ ವಿದ್ಯಾರ್ಥಿನಿಯರು ಅಷ್ಟೇ ಚಾಕಚಕ್ಯತೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟದಲ್ಲಿ ಭಾಗವಹಿಸಿ ಬಹುಮಾನ ಪಡೆದು ಸಂಭ್ರಮಿಸಿದ್ದಾರೆ.

ಒಟ್ಟಾರೆ ಸರ್ಕಾರಿ ಶಾಲಾ ಮಕ್ಕಳು ಪ್ರತಿಭೆಗೆ ಆ ಶಾಲಾ ವಾತಾವರಣವೇ ಹೊಸ ವೇದಿಕೆ ಸೃಷ್ಟಿಸಿದೆ.

Edited By : Nagesh Gaonkar
Kshetra Samachara

Kshetra Samachara

13/11/2021 08:01 pm

Cinque Terre

21.21 K

Cinque Terre

0

ಸಂಬಂಧಿತ ಸುದ್ದಿ