ನವಲಗುಂದ : ತಾಲೂಕಿನ ಮೊರಬ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 75 ನೇ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ವಕೀಲರಾದ ಎಸ್. ಎ. ಪಟ್ನಿವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳನ್ನ ಶಾಲೆ ಬಿಡಿಸಬೇಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಜೀವನ ರೂಪಿಸಿ ಸರಕಾರವು ಕೂಡಾ ಮಕ್ಕಳಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಭಾರತದ ಸಂಸತ್ತಿನಿಂದ ಮಾಡಲ್ಪಟ್ಟಿರುವ ಕಾನೂನು. ಈ ಕಾಯ್ದೆಯಡಿ ಭಾರತದಲ್ಲಿ 6 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ದೊರಕುವಂತೆ ಹಕ್ಕನ್ನು ನೀಡಲಾಗಿದೆ. ಈ ಕಾಯ್ದೆಯನ್ನು ಭಾರತ ಸಂವಿಧಾನದ 21A ಕಲಂ ಅಡಿ ಜಾರಿಗೊಳಿಸಲಾಗಿದೆ, ಈ ಕಾಯ್ದೆಯು ಜಾರಿಗೆ ಬಂದ ನಂತರ, ಮಕ್ಕಳಿಗೆ ಶಿಕ್ಷಣ ನೀಡುವದು ಮೂಲಭೂತ ಹಕ್ಕಾಗಿದೆ ಎಂದರು.
Kshetra Samachara
30/10/2021 04:30 pm