ಹುಬ್ಬಳ್ಳಿ: ಸಹೋದರ ಸಹೋದರಿಯರ ಸಂಬಂಧವನ್ನು ಮೆರೆಯುವ ಹಬ್ಬ, ರಕ್ಷಾ ಬಂಧನಕ್ಕೂ ಕೋವಿಡ್ ಅಡ್ಡಿಯೊಡ್ಡಿದೆ. ವರ್ಷಕ್ಕೊಮ್ಮೆ ಸಹೋದರಿಯರು ರಾಖಿ ಕಟ್ಟಿ ಅಣ್ಣನ ರಕ್ಷೆಯ ವಚನ ಪಡೆಯುವ ಸಂಪ್ರದಾಯಕ್ಕೆ ಈ ಬಾರಿ ಕೊರೊನಾ ವಿಘ್ನ ತಂದಿದೆ.
ಹೌದು, ಮಾರುಕಟ್ಟೆಯಲ್ಲಿ ಹೇರಳವಾಗಿ ರಾಖಿಗಳ ಸಂಗ್ರಹವಿದ್ದರೂ ಬೇಡಿಕೆ ಕುಸಿದಿದೆ. ಬಹುತೇಕ ಆನ್‌ಲೈನ್ ರಾಖಿ ಖರೀದಿಗೆ ಒಲವು ಹೆಚ್ಚಾಗಿದೆ. ಪರಿಣಾಮ ಪ್ರತಿ ವರ್ಷ ರಾಖಿ ಹಬ್ಬ ಬಂದರೆ ಸಾಕು ನಗರದ ಸ್ಟೇಶನರಿ, ಅಲಂಕಾರ ಸಾಮಗ್ರಿ, ಕಿರಾಣಿ ಅಂಗಡಿಗಳಲ್ಲಿ ತರಹೇವಾರಿ ರಾಖಿ ಕಾಣುತ್ತಿದ್ದವು. ಲಾಕ್‌ಡೌನ್, ವೈರಾಣು ಪ್ರಸರಣ ಭೀತಿಯಿಂದ ಈ ಬಾರಿ ಬೇಡಿಕೆ ಕುಂಠಿತವಾಗಿದೆ. ಬಹುತೇಕ ಯುವತಿಯರು, ಮಹಿಳೆಯರು ಸುರಕ್ಷತೆ ದೃಷ್ಟಿಯಿಂದ ಆನ್‌ಲೈನ್ ಮೂಲಕ ರಾಖಿ ಖರೀದಿಸಿದ್ದಾರೆ.
Kshetra Samachara
20/08/2021 01:59 pm