ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ಜನ್ಮದಿನದ ಅಂಗವಾಗಿ ಹು-ಧಾ ಮಹಾನಗರದ
ವಾರ್ಡ 29 ರಲ್ಲಿ ಬಿಜೆಪಿ ಮುಖಂಡ ಹುಧಾ ಮಹಾನಗರ ಜಿಲ್ಲೆ ಬಿಜೆಪಿ ರೈತ ಮೂರ್ಚಾ ಅಧ್ಯಕ್ಷರು ಈಶ್ವರಗೌಡ ಪಾಟೀಲ ನೇತೃತ್ವದಲ್ಲಿ ದೇವಾಂಗಪೇಠದಲ್ಲಿರುವ ಮನೋ ವಿಕಲತೆಯ ಹಾಗೂ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು.
ಇನ್ನೂ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಮಕ್ಕಳು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ತುಂಬು ಹೃದಯದಿಂದ ಹಾರೈಸಿ ಶುಭ ಕೋರಿದರು.
ಬಳಿಕ ಬಿಜೆಪಿ ಮುಖಂಡರು ಜಗದೀಶ್ ಶೆಟ್ಟರ್ ಅವರ ಭಾವಚಿತ್ರ ಹಿಡಿದು ಸಚಿವರು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಚಿಂತನೆ ನಡೆಸಲಿ ಹಾಗೂ ಇನ್ನೂ ಹೆಚ್ಚಿನ ಗೌರವ ಜಗದೀಶ್ ಶೆಟ್ಟರ್ ಅವರಿಗೆ ದೊರೆಯಲಿ ಎಂದು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾರುತಿ ಅವರಸಂಗ, ಬಸವರಾಜ ಶಿರೂರ, ಅಭಿಷೇಕ ಪಾಟೀಲ, ಅಣ್ಣಪ್ಪ ಬಂಡಿ, ಶೇಖಪ್ಪ ನರ್ತಿ,ಅಶೋಕ ಉಡುಪಿ, ದಯಾನಂದ ಹೂಗಾರ, ದಯಾನಂದ ಸಾವಂತ, ನಾಯ್ಕರ, ಮುಂತಾದವರು ಉಪಸ್ಥಿತರಿದ್ದರು.
Kshetra Samachara
17/12/2020 02:32 pm