ನವಲಗುಂದ : ಕಾರ್ತಿಕ ಮಾಸದ ಪ್ರಯುಕ್ತ ಇಂದು ಸಂಜೆ ನವಲಗುಂದದ ಗ್ರಾಮದೇವತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ್ದಲ್ಲದೆ, ದೇವಸ್ಥಾನದ ಆವರಣವನ್ನು ಭಕ್ತರು ದೀಪಗಳಿಂದ ಅಲಂಕಾರ ಮಾಡಿದ್ದರು.
ಇನ್ನೂ ದೇವಸ್ಥಾನಕ್ಕೆ ಬಂದ ಭಕ್ತರು ದೇವಸ್ಥಾನದ ಮುಂದಿನ ರಸ್ತೆಯಲ್ಲಿ ರಂಗೋಲಿ ಹಾಕಿ ಅದಕ್ಕೆ ತಕ್ಕಂತೆ ಚಂದದಿ ದೀಪಗಳಿಂದ ಅಲಂಕರಿಸಿದ್ದರು. ಭಕ್ತರಲ್ಲಿ ಸಡಗರ ಸಂಭ್ರಮ ಕೂಡ ಮನೆ ಮಾಡಿದ್ದು, ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿ ಆಗಿದ್ರು, ಇನ್ನೂ ಕೋವಿಡ್ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಹಾಗೂ ಮಾಸ್ಕ ಧರಿಸುವುದು ಕಡ್ಡಾಯ ಎಂದು ದೇವಸ್ಥಾನಡ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದರು.
Kshetra Samachara
11/12/2020 10:06 pm