ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಸ್ರಾರ್ಜುನ ಸೂರ್ಯವಂಶ ಕ್ಷತ್ರಿಯ ಸಮಾಜ ಆಗ್ರಹ

ಹುಬ್ಬಳ್ಳಿ: ರಾಜ್ಯ ಸರ್ಕಾರ ಸಹಸ್ರಾರ್ಜುನ ಸೂರ್ಯವಂಶ ಕ್ಷತ್ರೀಯ ಎಸ್.ಎಸ್.ಕೆ ಸಮಾಜಕ್ಕೆಪ್ರತ್ಯೇಕವಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಹುಬ್ಬಳ್ಳಿಯ ಶ್ರೀ ಸಹಸ್ರಾರ್ಜುನ ಎಸ್.ಎಸ್.ಕೆ ಸಮಾಜದ ಚಿಂತನ-ಮಂಥನ ವೇದಿಕೆಯ ವತಿಯಿಂದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.

ಎಸ್.ಎಸ್.ಕೆ‌ ಸಮಾಜದ ಸಾವಜಿ ಹಾಗೂ ಪಟೆಗಾರ ಸಮುದಾಯ ಕೂಡ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಅಲ್ಲದೇ ಎಸ್.ಎಸ್.ಕೆ‌ ಸಮಾಜದ ಬಹುತೇಕ ಜನರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಸಹಸ್ರಾರ್ಜುನ ಸೂರ್ಯವಂಶ ಕ್ಷತ್ರೀಯ ಎಸ್.ಎಸ್.ಕೆ ಸಮಾಜವನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವಲ್ಲಿ ರಾಜ್ಯಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

21/11/2020 05:28 pm

Cinque Terre

13.08 K

Cinque Terre

0

ಸಂಬಂಧಿತ ಸುದ್ದಿ