ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮೇಟಿ ತಂದು‌ಪೂಜೆ ಸಲ್ಲಿಸಿದ ರೈತರು

ಕಲಘಟಗಿ:ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ದೀಪಾವಳಿ ಅಮಾವಾಸ್ಯೆ ದಿನ ಹೊಲಗದ್ದೆಗಳಿಗೆ ಹೋಗಿ ಆಲದ ಮರವನ್ನು ಪೂಜೆಮಾಡಿ ಮೇಟಿ ಯನ್ನು ಮನೆಗೆ ತರುವ ಸಂಪ್ರದಾಯವನ್ನು ರೈತಾಪಿ ಜನರು ಮಾಡಿದರು.

ಮೇಟಿಯನ್ನು ತಂದು ಬಾಗಿಲದ ಮುಂದೆ ಇಟ್ಟು ಅದಕ್ಕೆ ಕರೆಬಳ್ಳಿಯನ್ನು ಹಾಕಿ ಪೂಜೆ‌ ಮಾಡುವ ಪದ್ಧತಿಯನ್ನು ಪಾಲಿಸಲಾಗುತ್ತದೆ. ಮಾರನೇ ದಿನ ಪಾಡ್ಯದಂದು ಮೇಟಿಯನ್ನು ಹಟ್ಟಿ ಜತೆಗೆ ಪೂಜಿಸುತ್ತಾರೆ. ಇದೇ ಮೇಟಿಯನ್ನು ಹೊಲಗದ್ದೆಗಳಲ್ಲಿ ಕಣವನ್ನು ಮಾಡಿದಾಗ

ಉಪಯೋಗ ಮಾಡುವ ಸಂಪ್ರದಾಯ ಇಂದಿಗೂ ಗ್ರಾಮಸ್ಥರು ಪಾಲಿಸುತ್ತಾ ಬಂದಿರುವುದು ವಿಶೇಷ.

Edited By : Manjunath H D
Kshetra Samachara

Kshetra Samachara

15/11/2020 07:20 pm

Cinque Terre

17.39 K

Cinque Terre

0

ಸಂಬಂಧಿತ ಸುದ್ದಿ