ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಉತ್ತರ ಕರ್ನಾಟಕದ ಶೀಗೆ ಹುಣ್ಣಿಮೆಯ ವಿಶೇಷತೆ

ನವಲಗುಂದ : ಶೀಗೆ ಹುಣ್ಣಿಮೆ ಉತ್ತರ ಕರ್ನಾಟಕದಲ್ಲಿ ಬಹಳ ವಿಶೇಷವಾಗಿ ಆಚರಿಸುವ ಹಬ್ಬ. ಹುಣ್ಣಿಮೆಯನ್ನು ಗೌರಿ ಹುಣ್ಣಿಮೆಯಂತಲು ಕರೆಯಲಾಗುತ್ತೆ, ಉತ್ತರ ಕರ್ನಾಟಕದ ಮಂದಿಗೆ ವರ್ಷದಲ್ಲಿ ಬರುವ ಒಟ್ಟು 12 ಹುಣ್ಣಿಮೆಗಳಲ್ಲಿ ಈ ಹುಣ್ಣಿಮೆ ಬಹಳ ವಿಶೇಷ ಹುಣ್ಣಿಮೆಯಾಗಿದೆ.

ಹುಣ್ಣಿಮೆಯಂದು ರೈತನ ಮಿತ್ರ ಎತ್ತುಗಳ ಮೈತೊಳೆದು, ವಿವಿಧ ಬಣ್ಣಗಳನ್ನು ಹಚ್ಚಿ, ಗೆಜ್ಜೆಕಟ್ಟಿ, ಜುಲಾಗಳನ್ನು ಹಾಕಿ ಶೃಂಗರಿಸುತ್ತಾರೆ. ಸಂಬಂಧಿಕರು, ಅಡ್ಡ ಬೀಗರು ಎಲ್ಲರನ್ನ ಹಬ್ಬಕ್ಕೆ ಕರೆದು ಎತ್ತಿನ ಬಂಡಿ, ಚಕ್ಕಡಿಗಳನ್ನು ಕಟ್ಟಿಕೊಂಡು ಹೊಲಕ್ಕ ಹೋಗುತ್ತಾರೆ.

ಶೀಗೆ ಹುಣ್ಣಿಮೆ ದಿನ ಹೊಲದಲ್ಲಿ ಬಂದ ಫಸಲಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ನೆರವೇರಿಸಿ, ಉತ್ತಮ ಬೆಳೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಈ ದಿವಸ ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡಲಾಗುತ್ತೆ, ಹಾಗೂ ಭೂಮಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ಈ ದಿನ ಹೊಲಕ್ಕೆ “ಚರಗ” ಚಲ್ಲುತ್ತಾರೆ. ಚರಗ ಅಂದ್ರೆ ಕೃಷಿ ಕುಟುಂಬದ ಮಹಿಳೆಯರು ಶೀಗೆ ಹುಣ್ಣಿಮೆ ಹಿಂದಿನ 101 ಜಾತಿಯ ಬೆರಕೆ ಸೊಪ್ಪು, ತರಕಾರಿ ಬೇಯಿಸಿ ಚರಗ ಸಿದ್ಧ ಮಾಡುತ್ತಾರೆ.

ಮರುದಿನ ನಸುಕಿನಲ್ಲೇ ರೈತು ಹೊಲಕ್ಕ ಹೋಗಿ ರೈತರು ತಮ್ಮ ಜಮೀನುಗಳಲ್ಲಿ ಬನ್ನಿ ಮರ ಅಥವಾ ಬೆಳೆದ ಪೈರುಗಳ ಮಧ್ಯೆ 5 ಜೋಳದ ದಂಟನ್ನು ತಂದು ನಿಲ್ಲಿಸಿ, ಅದರೊಳಗಡೆ ಚಿಕ್ಕದಾದ 5 ಕಲ್ಲುಗಳನ್ನು (ಪಂಚಪಾಂಡವರು) ಇಟ್ಟು ಪೂಜೆ ಸಲ್ಲಿಸುತ್ತಾರೆ. ನಂತರ ಮಹಿಳೆಯರು ಮಕ್ಕಳೆಲ್ಲರೂ ಸೇರಿ ಭೂತಾಯಿಗೆ ಉಡಿ ತುಂಬಿ, ನಂತರ ಹೊಲದ ತುಂಬಾ 'ಹೋಲಿಗೆ, ಹೋಲಿಗೆ' ಎನ್ನುತ್ತಾ ಚರಗ ಚೆಲ್ಲುತ್ತಾರೆ.

ಮನೆಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ, ಪ್ರಮುಖವಾಗಿ ಖಡಕ್‌ ಜೋಳದ ರೊಟ್ಟಿ, ಶೇಂಗಾ ಚಟ್ನಿ, ಗುರೇಳ್ಳ ಚಟ್ನಿ, ಎಣ್ಣೆ ಹೋಳಿಗೆ, ಶೇಂಗಾ ಹೋಳಿಗೆ, ಖಡಬು, ಖರ್ಚಿಕಾಯಿ, ಸೆಂಡಿಗೆ, ಹಪ್ಪಳ, ಕೊಡಬಳಿ, ಚಕ್ಕಲಿ, ಒಡೆ, ಮಿರ್ಚಿ, ಕರದ ಮೆಣಸಿನಕಾಯಿ, ಎಣ್ಣುಗಾಯಿ ಪಲ್ಯ, ಕಡಲೆಕಾಳು ಪಲ್ಯ, ಹಿಟ್ಟಿನಪಲ್ಯ, ಪುಂಡಿಪಲ್ಯೆ, ಡೊಣ್ಣಗಾಯಿ ಪಲ್ಯ, ಅಕ್ಕಿಹುಗ್ಗಿ, ಮೊಸರು ಬುತ್ತಿ, ಅನ್ನ-ಸಾಂಬಾರು ಈ ರೀತಿ ಅಡುಗೆ ಮಾಡಿಕೊಂಡು ಹೊಲದಲ್ಲಿ ಊಟ ಮಾಡುತ್ತಾ ಸಂಭ್ರಮ ಪಡುತ್ತಾರೆ.

Edited By : PublicNext Desk
Kshetra Samachara

Kshetra Samachara

10/10/2022 08:47 am

Cinque Terre

24.07 K

Cinque Terre

0

ಸಂಬಂಧಿತ ಸುದ್ದಿ