ಕಲಘಟಗಿ:ಆಧುನಿಕ ಕಾಲದಲ್ಲಿ ಮಹಿಳೆಯರು ಕೌಶಲ್ಯ ತರಬೇತಿಯ ಪಡೆಯುವ ಅಗತ್ಯವಿದ್ದು, ಅದರ ಪ್ರಯೋಜನವನ್ನು ಪಡೆದುಕೊಂಡು ಸ್ವ ಉದ್ಯೋಗ ಪ್ರಾರಂಭಿಸಬಹುದು ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕುಮಾರ ಕೆ ಎಫ್ ತಿಳಿಸಿದರು.
ಅವರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ವೆಕಾಸ್ ಸಂಸ್ಥೆಯಲ್ಲಿ ದೀನದಾಯಳ ಉಪಾಧ್ಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ
ತರಬೇತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಕಿಟ್ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಮಹಿಳೆಯರು ಕೌಶಲ್ಯ ತರಬೇತಿಗಳನ್ನು ಪಡೆದು ಆರ್ಥಿಕ ಸಬಲಿಕರಣ ಹೊಂದುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಮಲ್ಲಿಕಾರ್ಜುನ ಪುರದನಗೌಡರ,ಅಸಲಂ ಸೂರೆಗಲ್,ಉದಯ ಗೌಡರ,ಶಶಿಧರ ಕಟ್ಟಿಮನಿ,ಕಲ್ಲಪ್ಪ ಮಿರ್ಜಿ,ಅನ್ವರ್ ಖಾನ್,ಫಮಿದಾ ಮುಲ್ಲಾ ಉಪಸ್ಥಿತರಿದ್ದರು.
Kshetra Samachara
03/11/2020 03:24 pm