ಕಲಘಟಗಿ: ನಮ್ಮ ನಾಡು ನಮ್ಮ ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಸಿ ಎಂ ನಿಂಬಣ್ಣವರ ನುಡಿದರು. ಅವರು ತಾಲೂಕಾ ಆಡಳಿತದಿಂದ ಪಟ್ಟಣದ ಶಾಸಕರ ಮಾದರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ,65 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು,ಎಲ್ಲರಿಗೂ ಕನ್ನಡದ ಅಭಿಮಾನ ಇರಬೇಕು ಎಂದರು.
ಧ್ವಜಾರೋಹಣ ನೆರವೇರಿಸಿ ತಾಲೂಕು ದಂಡಾಧಿಕಾರಿ ಆಶೋಕ ಶಿಗ್ಗಾವಿ ಮಾತನಾಡಿ,ಕನ್ನಡ ನಾಡುನುಡಿ ಏಕತೆಗೆ ಶ್ರಮಿಸಿದ ಮಹನೀಯರ ಸೇವೆಯನ್ನು ಸ್ಮರಿಸೊಣ ಎಂದರು.ತಾ ಪಂ ಅಧ್ಯಕ್ಷೆ ಸುನೀತಾ ಮೇಲಿನಮನಿ,ಉಪಾಧ್ಯಕ್ಷ ಚಂದ್ರಗೌಡ ಪಾಟೀಲ,ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ತಾ ಪಂ ಇ ಓ ಎಂ ಎಸ್ ಮೇಟಿ,ಎನ್ ಎಫ್ ಕಟ್ಟೆಗೌಡರ, ಮಲ್ಲಿಕಾರ್ಜುನ ಪುರದನಗೌಡರ,ಐ ವಿ ಜವಳಿ,ಸಂಗ್ರಾಮ ಸೇನಾ ತಾಲೂಕ ಅಧ್ಯಕ್ಷ ಸಾತಪ್ಪ ಕುಂಕೂರ,ಶಂಕರಗೌಡ ಭಾವಿಕಟ್ಟಿ,ಎಸ್ ಎ ಚಿಕ್ಕನರತಿ ಹಾಗೂ ತಾ ಪಂ ಪ ಪಂ ಜನಪ್ರತಿನಿಧಿಗಳು,ಪೊಲೀಸ್ ಸಿಬ್ಬಂದಿ,ನೌಕರರು ಉಪಸ್ಥಿತರಿದ್ದರು.ಪಿ ವಿ ನಾಯಕ ನಿರೂಪಿಸಿದರು.
Kshetra Samachara
01/11/2020 12:27 pm