ಧಾರವಾಡ: ಧಾರವಾಡದ ದುರ್ಗಾದೇವಿ ಇಂದು ಸಾಂಪ್ರದಾಯಿಕ ಉಡುಗೆಯೊಂದಿಗೆ ಪುರಾತನವಾದ ಚಿನ್ನದ ಮುಖವಾಡ ಧರಿಸಿ ಕಂಗೊಳಿಸಿದಳು.
ನವರಾತ್ರಿ ಅಂಗವಾಗಿ ಧಾರವಾಡದ ಪ್ರಸಿದ್ಧ ದುರ್ಗಾದೇವಿಯನ್ನು ಒಂದೊಂದು ದಿನ ವಿಶೇಷವಾಗಿ ಸಿಂಗರಿಸಲಾಗುತ್ತಿದೆ.
ಶನಿವಾರ ದುರ್ಗೆಯನ್ನು ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿ ಸಾಂಪ್ರದಾಯಿಕ ಉಡುಗೆ ತೊಡಿಸಲಾಗಿತ್ತು.
ಇದರ ಜೊತೆಗೆ ದೇವಿಗೆ ಪುರಾತನವಾದ ಚಿನ್ನದ ಮುಖವಾಡವನ್ನೂ ಹಾಕಲಾಗಿತ್ತು. ಶನಿವಾರದ ಸಾಂಪ್ರದಾಯಿಕ ಪೂಜೆಯನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.
Kshetra Samachara
24/10/2020 09:12 pm