ಕುಂದಗೋಳ : ಸಂತ ಶಿಶುನಾಳ ಶರೀಫರಿಗೆ ಮೂಗುತಿ ನೀಡಿದ ಪವಾಡರೂಪಿಣಿ ಸುತ್ತ ಹಳ್ಳಿಗಳ ಭಕ್ತರು ಆರಾಧ್ಯ ದೈವ ಗುಡಗೇರಿ ದ್ಯಾಮವ್ವ ದೇವಿಯ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಪ್ರತಿ ದಿನವು ವಿಧ ವಿಧದ ಹೂ ಅಲಂಕಾರದ ಪೂಜಾಭಿಷೇಕ ಹೋಮ ಹವನ ಕಾರ್ಯಗಳು ನೆರವೇರುತ್ತಿದ್ದು ಸುತ್ತ ಹಳ್ಳಿಯ ಜನರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಕಂಗೊಳಿಸುವ ದೇವಾಲಯದ ದೀಪಾಲಂಕಾರ ನಡುವೆ ದೇವಿಯ ದರ್ಶನಕ್ಕೆ ಆಗಮಿಸುವ ಹಿರಿದಾದ ಭಕ್ತರ ದಂಡನ್ನ ದೇವಾಲಯದ ಕಮಿಟಿಯವರು ಕೊರೊನಾ ನಿಯಮ ಪಾಲನೆ ಅನ್ವಯ ಭಕ್ತರಿಗೆ ಮಾಸ್ಕ್ ನೀಡಿ ಕೈಗಳಿಗೆ ಸ್ಯಾನಿಟೈಜರ್ ಸಿಂಪಡಿಸಿ ಸಾಮಾಜಿಕ ಅಂತರದ ಪರಿಪಾಠದ ನಡುವೆ ಸತತ 7 ದಿನಗಳಿಂದ ತಾಯಿ ಗುಡಗೇರಿ ದ್ಯಾಮವ್ವನ ಘಟ್ಟ ಕಾರ್ಯಕ್ರಮ ನಡೆದಿದೆ.
ಈಗಾಗಲೇ ಮಹಿಳೆಯರು ಮಕ್ಕಳ ಆಗಮನ ಹೆಚ್ಚಿದ್ದು ವಿಜಯದಶಮಿ ದಿನದಂದು ಹೆಚ್ಚಿನ ಭಕ್ತ ಸಮೂಹ ಸೇರುವ ನಿರೀಕ್ಷೆಯಿದ್ದು ಶರನ್ನವರಾತ್ರಿ ಮಹೋತ್ಸವ ಪ್ರತಿ ವರ್ಷ ಹೋಲಿಸಿದರೆ ಈ ವರ್ಷ ಅತಿ ಸರಳವಾಗಿ ನೆರವೇರಲಿದೆ ಎಂದು ದೇವಸ್ಥಾನದ ಕಮಿಟಿಯವರು ತಿಳಿಸಿದ್ದು ದೆವಸ್ಥಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ಹೆಚ್ಚಿದೆ.
Kshetra Samachara
24/10/2020 07:50 pm