ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ- ದಸರಾ ಹಬ್ಬದ ನವರಾತ್ರಿ ಅಂಗವಾಗಿ, ಸುಮಾರು 80 ವರ್ಷದ ಪ್ರಾಚೀನ ಕಾಲದ ಈ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ನವದೇವತೆಯರನ್ನು ಕೂರಿಸಿ, ವಿವಿಧ ಅಲಂಕಾರಿಕವಾಗಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಷ್ಟಕ್ಕೂ ಈ ದೇವಸ್ಥಾನ ಎಲ್ಲಿದು ಅಂತಿರಾ,,, ಹಾಗಿದ್ದರೆ ಈ ಸ್ಟೋರಿ ನೋಡಿ.......
ಹೌದು, ನವರಾತ್ರಿ ಬಂದ್ರೆ ಸಾಕು ಎಲ್ಲರ ಮನೆಯಲ್ಲಿ ದೇವತೆಯ ಪೂಜೆಗೆ ಏನು ಕಮ್ಮಿ ಇರುವುದಿಲ್ಲ. ಅದೇ ರೀತಿಯಾಗಿ ಈ ದೇವಸ್ಥಾನದಲ್ಲಿ ದೇವತೆಯ ಪೂಜೆಯನ್ನು ನೋಡಲು ಎರಡು ಕಣ್ಣು ಸಾಲದು. ಈ ವಿಜೃಂಭಣೆ ಪೂಜೆ ನಡೆಯುತ್ತಿರುವುದು, ನಗರದ ಹೊಸ ಗಬ್ಬೂರ ಕ್ರಾಸ್ ಬಳಿ ಇರುವ ಶ್ರೀ ಗಾಳಿ ದುರ್ಗಮ್ಮ ದೇವಸ್ಥಾನದಲ್ಲಿ. ಇಲ್ಲಿ ವಿಶೇಷವಾಗಿ ಲೋಕಕಲ್ಯಾಣ ಅರ್ಥ ಗಣ ಹೋಮ, ಚಂಡಿಗ ಹೋಮ, ರುಧ್ರ ಹೋಮ, ದುರ್ಗಾ ಹೋಮ, ಹೀಗೆ ಎಲ್ಲ ರೀತಿಯ ಹೋಮ ಪೂಜೆಯನ್ನು ಮಾಡಲಾಗುತ್ತದೆ.
ಪ್ರತಿ ವರ್ಷ ನವರಾತ್ರಿ ಅಂಗವಾಗಿ, ಪೂರಾಣ ಹೇಳಲಾಗುತ್ತಿತ್ತು. ಆಡಳಿತ ಮಂಡಳಿಯೂ ಕೊರೊನಾ ಆಕ್ರಮಣದಿಂದಾಗಿ, ಈ ವರ್ಷ ಪ್ರತಿದಿನ ಒಬ್ಬ ದೇವತೆಯನ್ನು ಪ್ರತಿಷ್ಟಾಪನೆ ಮಾಡುವುದರ ಮೂಲಕ, ನವದುರ್ಗಿಯರನ್ನು ಪೂಜಿಸುತ್ತ ಭಕ್ತರಲ್ಲಿ ನಂಬಿಕೆ ಮೂಡಿಸಿದೆ.
ಈ ದೇವನಸ್ಥಾನದಲ್ಲಿ ನವದುರ್ಗಿಯರ ಪೂಜೆಯನ್ನು ಮಾಡುವುದು ಎಲ್ಲರ ಗಮನ ಸೆಳೆಯುವಂತಾಗಿರದೆ. ಅತೀ ಪ್ರಾಚೀನವಾಗಿರುವ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ, ತಮ್ಮ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ದೇವತೆಯಲ್ಲಿ ಬೇಡಿಕೊಂಡು ವಿಶೇಷ ಪೂಜೆ ಸಲ್ಲಿಸುತ್ತಾರೆ.....!
Kshetra Samachara
23/10/2020 08:21 pm