ಪಬ್ಲಿಕ್ ನೆಕ್ಸ್ಟ್ ವಿಶೇಷ:ಈರಣ್ಣ ವಾಲಿಕಾರ
ಹುಬ್ಬಳ್ಳಿ: ಹೀಗೆ ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಡ್ಯಾನ್ಸ್ ಮಾಡುತ್ತಿರುವ ಯುವಕ ಯುವತಿಯರು, ಇವೆಲ್ಲವನ್ನು ಎಂಜಾಯ್ ಮಾಡುತ್ತಿರುವ ಪ್ರೇಕ್ಷಕರು, ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನಗರದ ಯುನಿಟ್ರಿಕ್ಸ್ ಡ್ಯಾನ್ಸ್ ಆ್ಯಂಡ್ ಫಿಟ್ನೆಸ್ ಸ್ಟೂಡಿಯೋದಲ್ಲಿ..
ಜಿಲ್ಲೆಯಲ್ಲಿನ ವಿವಿಧ ಡ್ಯಾನ್ಸರ್ ಗಳನ್ನು ಒಂದೆಡೆ ಸೇರಿಸಿ, ಬ್ಯಾಟಲ್ ಡ್ಯಾನ್ಸ್ ಎಂಬ ಸ್ಪರ್ಧೆಯನ್ನು ವಿಭಿನ್ನವಾಗಿ ಆಯೋಜನೆ ಮಾಡಿದ ಕೊರಿಯೋಗ್ರಾಪರ್ ರಾಘವೇಂದ್ರ ಹಬೀಬ್ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಯುವಕ ಯುವತಿಯರು ಮಾಡುವ ಡ್ಯಾನ್ಸ್ ನೋಡುತ್ತಿದ್ದರೆ ಜೀವನೋತ್ಸಾಹ, ಉಲ್ಲಾಸ ನಿಜಕ್ಕೂ ಬೆರಗು ಮೂಡಿಸುತ್ತದೆ. ಬ್ಯಾಟಲ್ ಡ್ಯಾನ್ಸ್ ಸ್ಪರ್ಧೆಯು ಕ್ಷಣಾರ್ಧದಲ್ಲಿ ನಮ್ಮೆಲ್ಲರನ್ನೂ ಸೆಳೆಯುವುದಲ್ಲದೆ, ಮನಕ್ಕೆ ಹೊಸ ಚೈತನ್ಯ, ನೀಡುವಲ್ಲಿ ಯಶಸ್ವಿಯಾಗಿದೆ.
Kshetra Samachara
20/10/2020 01:51 pm