ಹುಬ್ಬಳ್ಳಿ: ಮಹಿಳೆಯು ತಾಯಿಯಾಗಿ, ಗೃಹಿಣಿಯಾಗಿ, ಜವಾಬ್ದಾರಿಯುತ ವ್ಯಕ್ತಿಯಾಗಿ ಸಮಾಜದಲ್ಲಿ ತನ್ನದೇ ಆದಂತಹ ಕಾರ್ಯಚಟುವಟಿಕೆಗಳ ಮೂಲಕ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಂಡಿದ್ದಾಳೆ. ಪ್ರತಿಯೊಂದು ಮಹಿಳೆಯಲ್ಲಿಯೂ ಒಂದಿಲ್ಲೊಂದು ಕಲೆ ಇದ್ದೆ ಇರುತ್ತದೆ. ಇಂತಹ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಇಲ್ಲೊಂದು ಸಂಸ್ಥೆ ಮಾಡುತ್ತಿದೆ.
ಹುಬ್ಬಳ್ಳಿ ಇನ್ನರ್ ವೀಲ್ ಕ್ಲಬ್ ಸಂಸ್ಥೆಯು, ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆಯರು ಮನೆಯಲ್ಲಿಯೇ ಹೆಚ್ಚಿನ ಜವಾಬ್ದಾರಿ ನಿರ್ವಹಿಸುವ ಮೂಲಕ ಮನೆಯ ಶಾಂತಿಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು.ಇಂತಹ ಮಹಿಳೆಯರಿಗೆ ಮನರಂಜನೆ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಗಳು ಮೂಲಕ ಇನ್ನರ್ ವೀಲ್ ಕ್ಲಬ್ ರಂಗೋಲಿ ಸ್ಪರ್ಧೆಯೊಂದನ್ನು ಆಯೋಜಿಸಿ ಮಹಿಳೆಯರಲ್ಲಿರುವ ಕಲೆಯನ್ನು ಹೊರತರಲು ಇಚ್ಚಿಸಿದ್ದು,ರಾಜ್ಯದ ಮೂಲೆ ಮೂಲೆಯಿಂದಲೂ ಈ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ನೋಡುಗರಿಗೆ ಇದು ರಂಗೋಲಿಯೋ ಅಥವಾ ವಾಸ್ತವ ಚಿತ್ರಣವೊ ಎಂಬುವಂತ ಮನಮೋಹಕ ಚಿತ್ರಣವನ್ನು ರಂಗೋಲಿಯಲ್ಲಿ ಬಿಡಿಸಿರುವ ಮಹಿಳೆಯರು ಅಪ್ರತಿಮ ಕಲೆಗೆ ಸಾಕ್ಷಿಯಾದರು.
Kshetra Samachara
19/10/2020 11:48 am