ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸ್ಕೆಚ್ ಹಾಕಿ 5.3ಲಕ್ಷ ರೂ. ಬ್ಯಾಗನ್ನೇ ಎಗರಸಿದ ಖದೀಮರು

ಹುಬ್ಬಳ್ಳಿ: ಟ್ರಾಫಿಕ್ ಬಿದ್ದಿದ್ದೆ ತಡಾ ಹಾಡಹಗಲೇ ಕಳ್ಳರಿಬ್ಬರು, ಚಲಿಸುತ್ತಿದ್ದ ವ್ಯಕ್ತಿಯೊಬ್ಬರ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್‌ನ್ನು ಕಿತ್ತಕೊಂಡು ಎಸ್ಕೇಪ್ ಆದ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರ ಸರ್ಕಲ್ 'ದಿ ಬಾಟಲ್ ಬಾಕ್ಸ್ ಹತ್ತಿರ ನಡೆದಿದೆ.

ಹೌದು.. ಅಹ್ಮದಾಬಾದ್ ನಿವಾಸಿ ವಿಜಯ್ ಕುಮಾರ್ ಜೈನ್ ಎಂಬಾತ, ಮನೆ ವ್ಯವಹಾರದ ಸುಮಾರು 5.3 ಲಕ್ಷ ರೂಪಾಯಿ ಹಣವನ್ನು ಸ್ಕೂಟಿಯಲ್ಲಿ ಇಟ್ಟುಕೊಂಡು ತೆರಳುತ್ತಿದ್ದ. ಇದನ್ನೆಲ್ಲಾ ಗಮನಿಸಿ ಪಾಲೋ‌ ಮಾಡಿದ ಖದೀಮರು ಸ್ಕೆಚ್ ಹಾಕಿ, ದೇಶಪಾಂಡೆ ನಗರದ ಸರ್ಕಲ್ ಬಳಿ ಟ್ರಾಫಿಕ್ ಆಗುತ್ತಿದ್ದಂತೇ ಸ್ಕೂಟಿಯಲ್ಲಿದ್ದ ಹಣದ ಬ್ಯಾಗ್‌ನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಈ ಬ್ಯಾಗಲ್ಲಿ ಬರೊಬ್ಬರಿ 5.3 ಲಕ್ಷ ಹಣ ಇತ್ತು ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಎಸಿಪಿ ಮುಕ್ತೆದಾರ, ಉಪನಗರ ಪೊಲೀಸರು ಪರಿಶೀಲನೆ ನಡೆಸಿ ಖದೀಮರ ಪತ್ತೆಗಾಗಿ ಬಲೆ ಬಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/10/2022 10:02 pm

Cinque Terre

88.49 K

Cinque Terre

4

ಸಂಬಂಧಿತ ಸುದ್ದಿ